ಕೊತ್ತಂಬರಿ ಸೊಪ್ಪು ಬೇಗನೇ ಹಾಳಾಗದಂತೆ ಇಡಲು ಟಿಪ್ಸ್

Krishnaveni K

ಶುಕ್ರವಾರ, 19 ಜನವರಿ 2024 (10:29 IST)
ಬೆಂಗಳೂರು: ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸುವ ವಸ್ತುಗಳಲ್ಲಿ ಕೊತ್ತಂಬರಿ ಸೊಪ್ಪು ಕೂಡಾ ಒಂದು. ಆದರೆ ಇದನ್ನು ಹಾಳಾಗದಂತೆ ವಾರವಾದರೂ ಸಂರಕ್ಷಿಸುಡುವುದೇ ದೊಡ್ಡ ತಲೆನೋವು.

ಸಾಮಾನ್ಯವಾಗಿ ಕೊತ್ತಂಬರಿ ಸೊಪ್ಪನ್ನು ತೊಳೆದು ಫ್ರಿಡ್ಜ್ ನಲ್ಲಿಡುವಾಗ ನೀರಿನಂಶ ಹಾಗೆಯೇ ಉಳಿದುಕೊಂಡಿದ್ದರೆ ಬೇಗನೇ ಕೊಳೆತುಹೋಗುತ್ತದೆ. ಹಾಗಂತ ಗಾಳಿಯಾಡುವಂತಿಟ್ಟರೆ ಒಣಗಿ ಹೋಗುತ್ತದೆ.  ಹಾಗಿದ್ದರೆ ಕೊತ್ತಂಬರಿ ಸೊಪ್ಪನ್ನು ಉಳಿಸುವುದು ಹೇಗೆ?

ಕೊತ್ತಂಬರಿ ಸೊಪ್ಪು ವಾರದವರೆಗೆ ಹಾಳಗಾದಂತಿಡಲು ಅದನ್ನು ತೊಳೆದ ಮೇಲೆ ಚೆನ್ನಾಗಿ ಗಾಳಿಯಾಡಲು ಹರಡಿ ನೀರಿನ ಅಂಶವೆಲ್ಲಾ ಆರುವಂತೆ ನೋಡಿಕೊಳ್ಳಬೇಕು. ನೀರಿನಂಶ ಆರಿದ ಮೇಲೆ ಪ್ಲಾಸ್ಟಿಕ್ ಡಬ್ಬದಲ್ಲಿ ಗಾಳಿಯಾಡದಂತೆ ಫ್ರಿಡ್ಜ್ ನಲ್ಲಿಟ್ಟರೆ ಕೆಲವು ದಿನದವರೆಗೆ ಕೊತ್ತಂಬರಿ ಸೊಪ್ಪು ಬಾಳಿಕೆ ಬರುತ್ತದೆ.

ಇದಲ್ಲದೆ, ಕೊತ್ತಂಬರಿ ಸೊಪ್ಪಿನ ದಂಟನ್ನು ತೆಗೆದು ಸೊಪ್ಪು ಬೇರ್ಪಡಿಸಿ ಗಾಳಿಯಾಡದಂತೆ ಇಟ್ಟರೂ ಕೆಲವು ಸಮಯ ಉಳಿಯುತ್ತದೆ. ಅದಲ್ಲದೇ ಹೋದರೆ ಪೇಪರ್ ಸುತ್ತಿ ಇಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ