ಮೊದಲಿಗೆ 1 ಕಪ್ ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಮೊಟ್ಟೆಯನ್ನು ಹಾಕಿ ಆಗ ಅದು ತೇಲುತ್ತಿದ್ದರೆ ಅದು ಫ್ರೆಶ್ ಆಗಿಲ್ಲ ಎಂದರ್ಥ. ಅಂತಹ ಮೊಟ್ಟೆಗಳನ್ನು ಬೇಗ ಅಡುಗೆಗೆ ಬಳಸಿಕೊಳ್ಳಿ. ಹಾಗೇ ಒಂದು ವೇಳೆ ಮೊಟ್ಟೆ ನೀರಿನಲ್ಲಿ ಮುಳುಗಿದರೆ ಅದು ಫ್ರೆಶ್ ಆಗಿದೆ ಎಂದರ್ಥ. ಆ ಮೊಟ್ಟೆಗಳನ್ನು 3-4 ದಿನಗಳ ಕಾಲ ಇಡಬಹುದು. ಅದು ಬೇಗ ಹಾಳಾಗುವುದಿಲ್ಲ.