ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚಿನ ಜನರು ಪ್ರಮುಖ ಆಹಾರವನ್ನಾಗಿ ಅಕ್ಕಿಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಬೆಳಗಿನ ತಿಂಡಿಯಲ್ಲೂ ಸಹ ಹೆಚ್ಚಾಗಿ ಅನ್ನದಿಂದ ಮಾಡುವ ಟೊಮೆಟೋ ರೈಸ್, ಪುಳಿಯೊಗರೆ, ಚಿತ್ರಾಹ್ನ, ಪಲಾವ್ ಮುಂತಾದವುಗಳಿರುತ್ತವೆ. ಟೊಮೆಟೋ ರೈಸ್ ಅನ್ನು ನೀವು ಹೆಚ್ಚಿನ ಮಸಾಲೆ ಪದಾರ್ಥಗಳನ್ನು ಬಳಸದೇ ಸುಲಭವಾಗಿ ಮತ್ತು ಶೀಘ್ರವಾಗಿ ಮಾಡಬಹುದು. ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
ಎಣ್ಣೆ - 4-5 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಮಾಡುವ ವಿಧಾನ:
ಟೊಮೆಟೋ, ಬೆಳ್ಳುಳ್ಳಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. 1 ದೊಡ್ಡ ಕಪ್ ಉದುರುದುರಾದ ಭಾಸುಮತಿ ಅನ್ನವನ್ನು ಅಥವಾ ನೀವು ದಿನನಿತ್ಯ ಬಳಸುವ ಯಾವುದೇ ಅನ್ನವನ್ನು ರೆಡಿಯಾಗಿಟ್ಟುಕ್ಕೊಳ್ಳಿ.
ಒಂದು ಪ್ಯಾನ್ ಅನ್ನು ತೆಗೆದುಕೊಂಡು ಸ್ಟೌ ಮೇಲಿಡಿ ಮತ್ತು 4-5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಸಾಸಿವೆ ಮತ್ತು ಉದ್ದಿನಬೇಳೆಯನ್ನು ಹಾಕಿ. ಉದ್ದಿನ ಬೇಳೆ ಸ್ವಲ್ಪ ಕೆಂಪಗಾದಾಗ ಅದಕ್ಕೆ ಜೀರಿಗೆ, ಬೆಳ್ಳುಳ್ಳಿ ಮತ್ತು ಹಸಿಮೆಣಸನ್ನು ಕ್ರಮವಾಗಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೆಳ್ಳುಳ್ಳಿ ಕೆಂಪಗಾದಾಗ ಅದಕ್ಕೆ ಹೆಚ್ಚಿದ ಟೊಮೆಟೋವನ್ನು ಸೇರಿಸಿ 2-3 ನಿಮಿಷ ಮಿಕ್ಸ್ ಮಾಡುತ್ತಿರಿ. ಟೊಮೆಟೋ ಬೆಂದು ಸ್ವಲ್ಪ ಕರಗುತ್ತಾ ಬಂದಂತೆ ಅದಕ್ಕೆ ಅರಿಶಿಣ ಮತ್ತು ಅಚ್ಚಖಾರದ ಪುಡಿಯನ್ನು(ನಿಮ್ಮ ಅಗತ್ಯಕ್ಕೆ ಸರಿಯಾಗಿ) ಸೇರಿಸಿ ಇನ್ನೊಮ್ಮೆ ಮಿಕ್ಸ್ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು 1 ಕಪ್ ಅನ್ನವನ್ನು ಹಾಕಿ 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿದರೆ ಬಿಸಿಬಿಸಿಯಾದ ಟೊಮೆಟೋ ರೈಸ್ ರೆಡಿ. ಇದರ ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹರಡಿ ತಿನ್ನಲು ಕೊಡಿ. ನೀವೂ ಒಮ್ಮೆ ಈ ಸರಳವಾದ ಟೊಮೆಟೋ ರೈಸ್ ರೆಸಿಪಿಯನ್ನು ಟ್ರೈ ಮಾಡಿ.