ಟೊಮೆಟೋವನ್ನು ಫ್ರಿಡ್ಜ್ ನಲ್ಲಿಡುತ್ತಿದ್ದೀರಾ? ಹಾಗಿದ್ದರೆ ಇದನ್ನು ತಪ್ಪದೇ ಓದಿ!

ಬುಧವಾರ, 31 ಜನವರಿ 2018 (08:32 IST)
ಬೆಂಗಳೂರು: ಸಾಮಾನ್ಯವಾಗಿ ಬೇಗನೇ ಕೊಳೆಯುವ ವಸ್ತು ಎನ್ನುವ ಕಾರಣಕ್ಕೆ ಟೊಮೆಟೋವನ್ನು ನಾವು ತುಂಬಾ ದಿನದವರೆಗೆ ಬಾಳ್ವಿಕೆ ಬರಲು ಫ್ರಿಡ್ಜ್ ನಲ್ಲಿಡುತ್ತೇವೆ. ಆದರೆ ಇದು ತಪ್ಪು ಎಂದಿದೆ ಹೊಸ ಅಧ್ಯಯನ ವರದಿ.
 

ಟೊಮೆಟೋ ಹಾಳಾಗಬಹುದೆಂದು ವಾರಕ್ಕೂ ಹೆಚ್ಚು ಕಾಲ 45 ಡಿಗ್ರಿ ಸೆಲ್ಶಿಯಸ್ ಗಿಂತ ಕಡಿಮೆ ಉಷ್ಣತೆಯಲ್ಲಿ ಸಂರಕ್ಷಿಸಿಡಬಾರದು. ಹಾಗೆ ಮಾಡುವುದರಿಂದ ಟೊಮೆಟೋದಲ್ಲಿ ನೈಸರ್ಗಿಕವಾಗಿ ಇರುವ ರುಚಿ, ಸುವಾಸನೆ ಎಲ್ಲವೂ ನಾಶವಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.

ಅದರ ಬದಲು 65 ಡಿಗ್ರಿ ಸೆಲ್ಶಿಯಸ್ ರೂಂ ಟೆಂಪರೇಚರ್ ನಲ್ಲಿ ಮೂರು ದಿನಗಳ ಕಾಲ ಇರಿಸಿದ ಟೊಮೆಟೋ ಫ್ರೆಶ್ ಆಗಿಯೇ ಇತ್ತು ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಹಾಗಾಗಿ ಆದಷ್ಟು ಫ್ರೆಶ್ ಟೊಮೆಟೋವನ್ನೇ ಬಳಸಿ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ