ಸೆನ್ಸೆಕ್ಸ್: ತೊಳಲಾಟದ ವಹಿವಾಟಿನಲ್ಲಿ ಅಲ್ಪ ಚೇತರಿಕೆ ಕಂಡ ಶೇರುಸೂಚ್ಯಂಕ

ಮಂಗಳವಾರ, 23 ಆಗಸ್ಟ್ 2016 (20:44 IST)
ಶೇರುಪೇಟೆಯ ಸೂಚ್ಯಂಕ ಇಂದಿನ ತೊಳಲಾಟದ ವಹಿವಾಟಿನಲ್ಲಿ ಕೊನೆಗೂ 5 ಪಾಯಿಂಟ್‌ಗಳ ಅಲ್ಪ ಚೇತರಿಕೆಯೊಂದಿಗೆ ಮುಕ್ತಾಯಗೊಂಡಿದೆ.
 
ಮಾಹಿತಿ ತಂತ್ರಜ್ಞಾನ, ಬ್ಯಾಂಕ್‌ಗಳು, ಸರಕಾರಿ ಸ್ವಾಮ್ಯದ ಕಂಪೆನಿಗಳ ಶೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ ಅಲ್ಪ ಚೇತರಿಕೆ ಕಂಡಿದೆ. 
 
ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 138 ಪಾಯಿಂಟ್‌ಗಳ ಕುಸಿತ ಕಂಡಿದ್ಗ ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 4.67 ಪಾಯಿಂಟ್‌ಗಳ ಏರಿಕೆ ಕಂಡು 27,990.21 ಅಂಕಗಳಿಗೆ ತಲುಪಿದೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 3.45 ಪಾಯಿಂಟ್‌ಗಳ ಏರಿಕೆ ಕಂಡು 8,632.60 ಅಂಕಗಳಿಗೆ ತಲುಪಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ