ಶಿವರಾತ್ರಿಯಂದು ಈ ಸಣ್ಣ ಕೆಲಸ ಮಾಡಿ ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ

ಬುಧವಾರ, 19 ಫೆಬ್ರವರಿ 2020 (09:17 IST)
ಬೆಂಗಳೂರು : ಮಹಾಶಿವರಾತ್ರಿಯಂದು ಶಿವಭಕ್ತರೆಲ್ಲರೂ ಭಕ್ತಿಯಿಂದ ಶಿವನ ಆರಾಧನೆ , ವೃತ, ಉಪವಾಸವನ್ನು ಮಾಡುತ್ತಾರೆ. ಅಂದು ಈ ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಸಮಸ್ಯೆಗಳನ್ನು ದೂರವಾಗಿಸಿಕೊಳ್ಳಬಹುದು.


* ಮಹಾಶಿವರಾತ್ರಿಯಂದು  ಎಳ್ಳು ಮಿಶ್ರಿತ ಶುದ್ಧ ನೀರನ್ನು ಬಿಲ್ವ ಪತ್ರೆಯಿಂದ ಶಿವನಿಗೆ ಅರ್ಪಿಸಿದರೆ ಮನೋಕಾಮನೆಗಳು ಈಡೇರುವುದರ ಜೊತೆಗೆ ಯಶಸ್ಸು ನಿಮ್ಮದಾಗುತ್ತದೆ.


*ನೌಕರಿಯಲ್ಲಿ ಏಳಿಗೆ ಕಾಣಲು ಮಹಾಶಿವರಾತ್ರಿಯಂದು ‘ಓಂ ನಮಃ ಶಿವಾಯ ‘ ಮಂತ್ರವನ್ನು 108 ಬಾರಿ ಪಠಿಸಬೇಕು.

*ಬಡತನ ದೂರವಾಗಲು ಮಹಾಶಿವರಾತ್ರಿಯಂದು ಹಸುವಿಗೆ ಆಹಾರ ನೀಡಬೇಕು. 5 ಕೆಜಿ ಕಾಕಂಬಿ ಮತ್ತು 5 ಕೆಜಿ ಗೋಧಿಹಿಟ್ಟಿನಿಂದ ರೊಟ್ಟಿ ತಯಾರಿಸಿ ಹಸುಗಳಿಗೆ ನೀಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ