ದೇಶಿಯ ಟೂರ್ನಮೆಂಟ್ ಗಳಲ್ಲಿ ಆಡುವ ಅವಕಾಶ ಪಡೆದ ಬಿಹಾರಿ ತಂಡ
ಶುಕ್ರವಾರ, 5 ಜನವರಿ 2018 (07:07 IST)
ನವದೆಹಲಿ: ಬಿಹಾರಿ ತಂಡಕ್ಕೆ ಒಂದು ಸಂತಸದ ವಿಷಯವೆನೆಂದರೆ ರಣಜಿ ಸೇರಿದಂತೆ ಯಾವುದೇ ದೇಶಿಯ ಟೂರ್ನಮೆಂಟ್ ಗಳಲ್ಲಿ ಆಡುವ ಅವಕಾಶ ಇಲ್ಲದೆ ಇದ್ದ ಬಿಹಾರಿ ತಂಡಕ್ಕೆ ಈಗ ರಣಜಿ ಸೇರಿದಂತೆ ಇತರ ದೇಶಿಯ ಟೂರ್ನಮೆಂಟ್ ಗಳಲ್ಲಿ ಸೇರಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಗುರುವಾರ ಬಿಸಿಸಿಐಗೆ ಆದೇಶ ನೀಡಿದೆ.
ಬಿಹಾರಿ ಕ್ರಿಕೆಟ್ ಸಂಸ್ಥೆ ಬಿಸಿಸಿಐನಲ್ಲಿ ಸದಸ್ಯತ್ವ ವನ್ನು ಕಳೆದುಕೊಂಡಿದ್ದರಿಂದಾಗಿ 2000 ರಿಂದ ರಣಜಿ ಸೇರಿದಂತೆ ಯಾವುದೇ ದೇಶಿಯ ಟೂರ್ನಮೆಂಟ್ ಗಳಲ್ಲಿ ಆಡುವ ಅವಕಾಶವಿರಲ್ಲಿಲ್ಲ. ಈಗ ಕ್ರಿಕೆಟಿನ ಹಿತದೃಷ್ಟಿಯಿಂದ ಬಿಹಾರಿ ತಂಡಕ್ಕೆ ದೇಶಿಯ ಟೂರ್ನಮೆಂಟಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ