ಗುಜರಾತ್-ರಾಜಸ್ಥಾನ್ ಫೈನಲ್ ಫೈಟ್ ಇಂದು! ಯಾರೂ ಗೆದ್ದರೂ ದಾಖಲೆ!

ಭಾನುವಾರ, 29 ಮೇ 2022 (14:30 IST)

ಚೊಚ್ಚಲ ಪ್ರವೇಶದಲ್ಲೇ ಪ್ರಶಸ್ತಿ ಎತ್ತಿಹಿಡಿಯುವ ಗುರಿ ಹೊಂದಿರುವ ಗುಜರಾತ್ ಟೈಟಾನ್ಸ್ ಮತ್ತು ಚೊಚ್ಚಲ ಆವೃತ್ತಿ ನಂತರ ಎದುರಿಸುತ್ತಿರುವ ಪ್ರಶಸ್ತಿ ಬರ ನೀಗಿಸಿಕೊಳ್ಳುವ ವಿಶ್ವಾಸದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡಗಳು ಭಾನುವಾರ ನಡೆಯುವ ಐಪಿಎಲ್ ಫೈನಲ್ ನಲ್ಲಿ ಮುಖಾಮುಖಿ ಆಗುತ್ತಿವೆ.

ಅಹಮದಾಬಾದ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಯಾರೂ ಗೆದ್ದರು ವಿಶಿಷ್ಟ ದಾಖಲೆ ಬರೆಯಲಿವೆ.

ಇದೇ ಮೊದಲ ಬಾರಿ ಐಪಿಎಲ್ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಗೆದ್ದು ರಾಜಸ್ಥಾನ್ ರಾಯಲ್ಸ್ ನಂತರ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ವಿಶೇಷ ಅಂದರೆ ಅದೇ ತಂಡವನ್ನು ಸೋಲಿಸಿ ಈ ಸಾಧನೆ ಬರೆಯುವ ಅವಕಾಶ ಲಭಿಸಿದೆ.

ಮತ್ತೊಂದೆಡೆ ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದು ದಾಖಲೆ ಬರೆದಿತ್ತು. ಆದರೆ ನಂತರ ಒಂದೂ ಬಾರಿಯೂ ಪ್ರಶಸ್ತಿ ಗೆಲ್ಲಲು ಆಗದೇ ಬರ ಎದುರಿಸುತ್ತಿತ್ತು. ಈ ಬಾರಿ ಸಂಜು ಸ್ಯಾಮ್ಸನ್ ಸಾರಥ್ಯದಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆದ್ದು ದಾಖಲೆ ಬರೆಯುವುದೇ ಎಂಬ ಕುತೂಹಲ ಮೂಡಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ