ರದ್ದಾಗುವ ಭೀತಿಯಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ

ಶುಕ್ರವಾರ, 22 ಮೇ 2020 (09:11 IST)
ನವದೆಹಲಿ: ಕೊರೋನಾ ಮಹಾಮಾರಿಗೆ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟ ರದ್ದಾಗುವ ಸಾಧ‍್ಯತೆಯಿದೆ. ಕೊರೋನಾದಿಂದಾಗಿ ಜಾಗತಿಕವಾಗಿ ಯಾವುದೇ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಒಲಿಂಪಿಕ್ಸ್ ಮೇಲೂ ಕೊರೋನಾ ಭೀತಿಯಿದೆ.


ಜಪಾನ್ ನಲ್ಲಿ ಜುಲೈನಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕೊರೋನಾದಿಂದಾಗಿ ಮುಂದೂಡಿಕೆಯಾಗಿತ್ತು. ಮುಂದಿನ ವರ್ಷವೂ ಅಲ್ಲಿನ ಸರ್ಕಾರದ ಅನುಮತಿ ಸಿಕ್ಕರೂ ಕ್ರೀಡಾಳುಗಳು ಆ ದೇಶಕ್ಕೆ ಪ್ರವಾಸ ಮಾಡುವುದು ಅನುಮಾನ. ಹೀಗಾಗಿ ಪ್ರತಿಷ್ಠಿತ ಕೂಟ ರದ್ದಾಗುವ ಭೀತಿಯಲ್ಲಿದೆ.

ಒಂದು ವೇಳೆ 2021 ರಲ್ಲಿ ಕೂಟ ನಡೆಯದೇ ಇದ್ದರೆ ಈ ಬಾರಿಯ ಒಲಿಂಪಿಕ್ಸ್ ನ್ನು ರದ್ದುಗೊಳಿಸುವುದಾಗಿ ಐಒಸಿ ಮುಖ್ಯಸ್ಥ ಥಾಮಸ್ ಬಾಚ್ ಹೇಳಿದ್ದಾರೆ. ಮುಂದಿನ ವರ್ಷದ ವೇಳೆಗೆ ಪರಿಸ್ಥಿತಿ ಸುಧಾರಿಸಿದರೆ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಒಲಿಂಪಿಕ್ಸ್ ನಡೆಯುವ  ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ