Sania Mirza: ಭಾರತದಲ್ಲಿ ಪಾಕಿಸ್ತಾನಿಯರಿಗೆ ಜಾಗ ಇಲ್ಲ: ಕೇಂದ್ರದ ನಿರ್ಧಾರದಿಂದ ಸಾನಿಯಾ ಮಿರ್ಜಾ ಪುತ್ರನಿಗೂ ತೊಂದರೆಯಾಗುತ್ತಾ
ಎಲ್ಲರಿಗೂ ಗೊತ್ತಿರುವ ಹಾಗೆ ಸಾನಿಯಾ ಮಿರ್ಜಾ ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು 2010 ರಲ್ಲಿ ವಿವಾಹವಾಗಿ ಈಗ ವಿಚ್ಛೇದನ ಪಡೆದಿದ್ದಾರೆ. ಆದರೆ ಇವರಿಬ್ಬರ ಪುತ್ರ ಇಝಾನ್ ಈಗ ಸಾನಿಯಾ ಬಳಿಯಿದ್ದಾರೆ.
ತಂದೆ ಪಾಕಿಸ್ತಾನಿಯಾಗಿರುವ ಕಾರಣ ಇಝಾನ್ ಗೂ ಈ ನಿಯಮ ಅನ್ವಯವಾಗುತ್ತದಾ ಎನ್ನುವ ಪ್ರಶ್ನೆ ಕೆಲವರಲ್ಲಿದೆ. ಆದರೆ ಇಝಾನ್ ಗೆ ಈ ನಿಯಮ ಅನ್ವಯವಾಗಲ್ಲ. ಯಾಕೆಂದರೆ ಸಾನಿಯಾ ಈಗಾಗಲೇ ತಮ್ಮ ಪುತ್ರನನ್ನು ಭಾರತ ನಾಗರಿಕತ್ವಕ್ಕೆ ನೊಂದಾಯಿಸಿಕೊಂಡಿದ್ದಾರೆ. ಹೀಗಾಗಿ ಇಝಾನ್ ಗೆ ಭಾರತೀಯ ಪೌರತ್ವವಿದೆ. ಆತ ಹುಟ್ಟಿದ್ದೂ ಭಾರತದಲ್ಲಿಯೇ. ಹೀಗಾಗಿ ಆತನಿಗೆ ಈ ನಿಯಮ ಅನ್ವಯವಾಗುವುದಿಲ್ಲ.