ಪಂದ್ಯದ ವೇಳೆ ಋತುಸ್ರಾವ: ಫ್ರೆಂಚ್ ಓಪನ್ ನಿಂದ ಹೊರನಡೆದ ಚೀನಾ ಆಟಗಾರ್ತಿ!
ಚೀನಾದ ಆಟಗಾರ್ತಿ ಫ್ರೆಂಚ್ ಓಪನ್ ಟೆನಿಸ್ ಪಂದ್ಯದ ವೇಳೆಯೇ ಋತುಸ್ರಾವದಿಂದ ಹೊಟ್ಟೆನೋವಿಗೆ ಒಳಗಾದ ಹಿನ್ನೆಲೆಯಲ್ಲಿ ಪಂದ್ಯದ ನಡುವೆ ಹೊರಗೆ ನಡೆದಿದ್ದಾರೆ.
ಚೀನಾದ 19 ವರ್ಷದ ಯುವತಿ ಜೆಂಗ್ ಕ್ವಿನ್ ವೆನ್ ಸೋಮವಾರ ನಡೆದ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವೆಟ್ನಿಕ್ ವಿರುದ್ಧದ ವನಿತೆಯರ ಸಿಂಗ್ಸ್ ಪಂದ್ಯದ ವೇಳೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಹೊರನಡೆಯಬೇಕಾಯಿತು.
ವಿಶ್ವದ ನಂ.೧ ಆಟಗಾರ್ತಿ ವಿರುದ್ಧ ಪ್ರಬಲ ಹೋರಾಟ ನಡೆಸಿದ್ದ ಜೆಂಗ್ ಕ್ವಿನ್ ವೆನ್ 6-7 (57)6-0, 6-2 ಸೆಟ್ ಗಳಿಂದ ಮುನ್ನಡೆ ಸಾಧಿಸಿ ಟೈಬ್ರೇಕರ್ ಹಂತದಲ್ಲಿದ್ದಾಗ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಇದಕ್ಕೂ ಮುನ್ನ 2ನೇ ಸೆಟ್ ವೇಳೆ ಕಾಲು ನೋವು ಕಾಣಿಸಿಕೊಂಡರೂ ಚಿಕಿತ್ಸೆ ಪಡೆದು ಮತ್ತೆ ಆಟ ಮುಂದುವರಿಸಿದ್ದರು.
ಋತುಸ್ರಾವ ಆದ ಮೊದಲ ದಿನ ನನಗೆ ಯಾವಾಗಲೂ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಹೆಣ್ಣಾಗಿ ನನ್ನ ಪ್ರಾಕೃತಿಕ ಸಮಸ್ಯೆ ವಿರುದ್ಧ ನಾನು ಹೋಗಲು ಸಾಧ್ಯವಿಲ್ಲ. ನಾನು ಗಂಡಾಗಿ ಹುಟ್ಟಿದ್ದರೆ ಚೆನ್ನಾಗಿತ್ತು ಎಂದು ಅನಿಸುತ್ತದೆ ಎಂದು ಪಂದ್ಯದಿಂದ ಹೊರಗೆ ನಡೆದ ನಂತರ ಜೆಂಗ್ ಕ್ವಿನ್ ವೆನ್ ನೋವು ತೋಡಿಕೊಂಡಿದ್ದಾರೆ.