ಪ್ಯಾರಿಸ್ ಒಲಂಪಿಕ್ಸ್: ಮೂರನೇ ಪದಕದ ಮೇಲೆ ಕಣ್ಣಿಟ್ಟ ಮನು ಬಾಕರ್

Sampriya

ಬುಧವಾರ, 31 ಜುಲೈ 2024 (12:04 IST)
Photo Courtesy X
ನವದೆಹಲಿ: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಎರಡು ಪದಕ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದ ಮನು ಬಾಕರ್ ಇದೀಗ ಮೂರನೇ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಈ ಹಿಂದೆ ಸ್ವತಂತ್ರ ಪೂರ್ವದಲ್ಲಿ ಅಂದರೆ 1900ರಲ್ಲಿ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲಿ ಅಂದಿನ ಬ್ರಿಟಿಷ್ ನಾರ್ಮನ್ ಪ್ರಿಚರ್ಡ್ ಭಾರತದ ಪರ ಎರಡು ಪದಕ ಗೆದ್ದು ದಾಖಲೆ ಮಾಡಿದ್ದರು. ಆ ನಂತರ ಈ ಸಾಧನೆ ಮಾಡಿದ್ದು ಮನು ಭಾಕರ್ ಅವರು. ಮನು 2 ಕಂಚಿನ ಪದಕ ಗೆದ್ದರೆ, ಪ್ರಿಚರ್ಡ್ ಎರಡು ಬೆಳ್ಳಿ ಪದಕಗಳನ್ನು ಐತಿಹಾಸಿಕ ದಾಖಲೆ ನಿರ್ಮಿಸಿದ್ದರು.

ಇನ್ನೂ ವಿಶೇಷ ಏನೆಂದರೆ ಇದೀಗ ಮನು ಬಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೂರನೇ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.  25 ಮೀಟರ್ ಏರ್​ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮನು ಭಾಕರ್ ಮತ್ತೊಂದು ಪದಕ ಗೆದ್ದು ಪ್ರಿಚಾರ್ಡ್ ದಾಖಲೆ ಮುರಿಯುವ ನಿರೀಕ್ಷೆಯಲ್ಲಿದ್ದಾರೆ.

ಮನು ಬಾಕರ್‌ಗೆ ನೆಚ್ಚಿನ ಸ್ಪರ್ಧೆಯಾಗಿರುವ 25ಮೀಟರ್‌ ಏರ್ ಪಿಸ್ತೂಲ್ ವೈಯಕ್ತಿಕ ಸುತ್ತಿನಲ್ಲಿ  ಪದಕದ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಈ ಸ್ಪರ್ಧೆಯಲ್ಲಿ ಪದಕವನ್ನು ಪಡೆದರೆ ದೇಶದ ಮೊದಲ ಕ್ರೀಡಾಪಟು ಒಂದೇ ಕೂಟದಲ್ಲಿ ಮೂರು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆ ನಿರ್ಮಿಸಲಿದ್ದಾರೆ.  ಈಗಾಗಲೇ ನಡೆದ 10ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಹಾಗೂ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ