ಪಿಟಿ ಉಷಾ ಕಳಪೆ ತರಬೇತಿಯಿಂದ ರಿಯೊ ಒಲಿಂಪಿಕ್ಸ್‌ನಲ್ಲಿ ಟಿಂಟು ಲುಕಾಗೆ ವೈಫಲ್ಯ

ಶನಿವಾರ, 27 ಆಗಸ್ಟ್ 2016 (11:16 IST)
ರಿಯೊ ಒಲಿಂಪಿಕ್ಸ್‌ನಲ್ಲಿ ಟಿಂಟು ಲುಕಾ ಅವರ ನಿರಾಶಾದಾಯಕ ಪ್ರದರ್ಶನದ ಬಳಿಕ ಕೋಚ್ ಪಿಟಿ ಉಷಾ ಅವರ ಕೇಂದ್ರದಲ್ಲಿ ಟಿಂಟು ಲುಕಾಗೆ ಕಳಪೆ ತರಬೇತಿ ನೀಡಿದ್ದಾಗಿ ಅಥ್ಲೀಟ್ ಅವರ ಚಿಕ್ಕಪ್ಪ  ಟೀಕಿಸಿದ್ದಾರೆ.
 
 ಟಿಂಟು ಚಿಕ್ಕಪ್ಪ ಜೋಯಿಚಾನ್ ಮಾಜಿ ಓಟದ ರಾಣಿ ಮತ್ತು ಪ್ರಸಕ್ತ ಕೋಚ್ ಪಿಟಿ ಉಷಾ ಅವರಿಗೆ ತರಬೇತಿ ಸಂಸ್ಥೆಯ ಹೆಸರಿನಲ್ಲಿ ಬಿಸಿನೆಸ್ ಕೇಂದ್ರವನ್ನು ನಡೆಸುತ್ತಿದ್ದಾರೆಂದು ಟೀಕಿಸಿದರು.
 
ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸಮನಾದ ಸೌಲಭ್ಯಗಳು ತರಬೇತಿ ಶಾಲೆಯಲ್ಲಿಲ್ಲ. ಇದಲ್ಲದೇ ಉಷಾ ತನ್ನ ಅಥ್ಲೆಟಿಕ್ಸ್ ವೈಭವಕ್ಕೆ ಚ್ಯುತಿವುಂಟಾಗುತ್ತದೆಂಬ ಭಯದಿಂದ ಉದ್ದೇಶಪೂರ್ವಕವಾಗಿ ಅವಕಾಶಗಳನ್ನು ನಿರಾಕರಿಸಿರಬಹುದು ಎಂದು ಜೋಯಿಚಾನ್ ಅನುಮಾನಿಸಿದರು. 
 
 ರಿಯೊ ಕ್ರೀಡಾಕೂಟದಲ್ಲಿ 2014ರ ಬೆಳ್ಳಿ ಪದಕ ವಿಜೇತೆ ಟಿಂಟು  800 ಮೀಟರ್ ಹೀಟ್‌ನಲ್ಲಿ 6 ನೇ ಸ್ಥಾನ ಗಳಿಸಿದರು. ಭಾರತದ  ಟ್ರಾಕ್ ಮತ್ತು ಫೀಲ್ಡ್ ಈವೆಂಟ್‌ನಲ್ಲಿ ಭಾರತದ ಶ್ರೇಷ್ಟ ಕ್ರೀಡಾಪಟು ಎಂದು ಪರಿಗಣಿತರಾದ ಉಷಾ 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವುದಕ್ಕೆ ಸಮೀಪದಲ್ಲಿದ್ದರು.
 
ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಫೋಟೊಫಿನಿಷ್‌ನಿಂದ ಅವರಿಗೆ ಪದಕ ಮಿಸ್ ಆಗಿತ್ತು. ಇದು 1960ಲ್ಲಿ ಮಿಲ್ಕಾಸಿಂಗ್ ಒಲಿಂಪಿಕ್ಸ್‌ನಲ್ಲಿ ಪದಕವಂಚಿತರಾಗಿದ್ದನ್ನು ನೆನಪಿಸುತ್ತದೆ.  ಲೆಜೆಂಡ್ ಉಷಾ ಕೇರಳದಲ್ಲಿ ಕ್ರೀಡಾ ತರಬೇತಿ ಕೇಂದ್ರ ಅಥ್ಲೆಟಿಕ್ಸ್ ಶಾಲೆ ನಿರ್ವಹಿಸುತ್ತಿದ್ದು, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಅಂತಾರಾಷ್ಟ್ರೀಯ ಅಥ್ಲೀಟ್‌ಗಳಿಗೆ ಸರಿಸಾಟಿಯಾಗುವಂತೆ ಪಳಗಿಸುವ ಗುರಿಯೊಂದಿಗೆ ಸ್ಥಾಪಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ