ಕಾಮನ್ ವೆಲ್ತ್ ಗೇಮ್ಸ್: ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕಿಂದು 3 ಚಿನ್ನದ ನಿರೀಕ್ಷೆ

ಸೋಮವಾರ, 8 ಆಗಸ್ಟ್ 2022 (08:40 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇಂದು ಭಾರತ ಮಹತ್ವದ 6 ಪಂದ್ಯಗಳನ್ನಾಡುತ್ತಿದ್ದು, ಈ ಪೈಕಿ ಮೂರು ಬ್ಯಾಡ್ಮಿಂಟನ್ ವಿಭಾಗದ ಸ್ಪರ್ಧೆಗಳಾಗಿವೆ.

ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತದ ಆಶಾಕಿರಣ ಪಿ.ವಿ. ಸಿಂಧು ಇಂದು ಮಧ್ಯಾಹ್ನ 1.20 ಕ್ಕೆ ನಡೆಯುವ ಫೈನಲ್ ಸ್ಪರ್ಧೆಯಲ್ಲಿ ಆಡಲಿದ್ದಾರೆ. ಪುರುಷರ ವಿಭಾಗದಲ್ಲಿ ಲಕ್ಷ್ಯ ಸೇನ್ ಫೈನಲ್ ಆಡಲಿದ್ದು, ಈ ಪಂದ್ಯ ಮಧ್ಯಾಹ್ನ 2.10 ಕ್ಕೆ ನಡೆಯಲಿದೆ. ಇದಲ್ಲದೆ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ 3.50 ಕ್ಕೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಡಲಿದೆ.  ಈ ಮೂರೂ ಪಂದ್ಯಗಳಲ್ಲಿ ಭಾರತಕ್ಕೆ ಭಾರೀ ಭರವಸೆಯಿದೆ.

ಇದಲ್ಲದೆ ಪುರುಷರ ಹಾಕಿ ತಂಡ ಇಂದು ಸಂಜೆ 5 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯ ಆಡಲಿದೆ. ಟೇಬಲ್ ಟೆನಿಸ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆಯ ತಾರೆ ಶರತ್ ಕಮಲ್ ಫೈನಲ್ ಪಂದ್ಯವಾಡಲಿದ್ದಾರೆ.  ಈ ಪಂದ್ಯ 3.50 ಕ್ಕೆ ನಡೆಯುವುದು. ಟೇಬಲ್ ಟೆನಿಸ್ ನ ಪುರುಷರ ವಿಭಾಗದ ಕಂಚಿನ ಪದಕಕ್ಕಾಗಿ ನಡೆಯುವ ಹೋರಾಟದಲ್ಲಿ ಭಾರತದ ಸತ್ಯನ್ ಜ್ಞಾನಶೇಖರನ್ ಸೆಣಸಾಡಲಿದ್ದಾರೆ. ಈ ಪಂದ್ಯ 3.25 ಕ್ಕೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ