ಕಾಮನ್ ವೆಲ್ತ್ ಗೇಮ್ಸ್: ನಿಖತ್ ಝರೀನ್ ಗೆ ಚಿನ್ನ, ಟಿಟಿಯಲ್ಲಿ ಬೆಳ್ಳಿ, ಭಾರತ ನಾಲ್ಕನೇ ಸ್ಥಾನಕ್ಕೆ

ಭಾನುವಾರ, 7 ಆಗಸ್ಟ್ 2022 (20:57 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಾಕ್ಸರ್ ಗಳ ಭಾರತಕ್ಕೆ ಚಿನ್ನದ ಸುರಿಮಳೆಗೈಯುತ್ತಿದ್ದಾರೆ. ಇಂದೂ ಬಾಕ್ಸರ್ ಗಳಿಂದ ಭಾರತಕ್ಕೆ ಒಟ್ಟು ಮೂರು ಚಿನ್ನದ ಪದಕ ಸಿಕ್ಕಿದೆ.

ಅಮಿತ್ ಪಂಘಲ್, ನೀತು ಬಳಿಕ ಮಹಿಳಾ ತಾರೆ ನಿಖತ್ ಝರೀನ್ 50 ಕೆ.ಜಿ. ವಿಭಾಗದಲ್ಲಿ ಫೈನಲ್ ಗೆದ್ದು ಚಿನ್ನ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತ 17 ಚಿನ್ನದ ಪದಕ ಗೆದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ.

ಆದರೆ ಟೇಬಲ್ ಟೆನಿಸ್ ಪುರುಷರ ಡಬಲ್ಸ್ ನಲ್ಲಿ ಭಾರತದ ಶರತ್ ಕಮಲ್-ಜ್ಞಾನೇಶ್ವರನ್ ಜೋಡಿ ಫೈನಲ್ ನಲ್ಲಿ ಎಡವಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ