ಫುಟ್ ಬಾಲ್ ದೊರೆ ಪೀಲೆ ಇನ್ನಿಲ್ಲ

ಶುಕ್ರವಾರ, 30 ಡಿಸೆಂಬರ್ 2022 (09:20 IST)
ನವದೆಹಲಿ: 2022 ರ ಕೊನೆ ದಿನ ಯಾಕೋ ಒಂದೊಂದೇ ಶಾಕಿಂಗ್ ಸುದ್ದಿ ನೀಡುತ್ತಿದೆ. ಫುಟ್ ಬಾಲ್ ದೊರೆ ಪೀಲೆ ನಿಧನರಾಗಿದ್ದಾರೆ.

ಕರುಳಿನ ಕ್ಯಾನ್ಸರ್ ಗೊಳಗಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಜೊತೆಗೆ ಮೂತ್ರಪಿಂಡದ ಸಮಸ್ಯೆಯಿತ್ತು. ಇದೀಗ ತಮ್ಮ 82 ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಅವರ ಪುತ್ರಿ ಈ ವಿಚಾರವನ್ನು ಪ್ರಕಟಿಸಿದ್ದಾರೆ. 92 ಅಂತಾರಾಷ್ಟ್ರೀಯ ಪಂದ್ಯಗಳಿಂದ 77 ಗೋಲು ಗಳಿಸಿದ ಖ್ಯಾತಿ ಪೀಲೆ ಅವರದ್ದು. ಫುಟ್ ಬಾಲ್ ಜಗತ್ತಿನ ಸರ್ವಕಾಲಿಕ ಶ್ರೇಷ್ಠರಾಗಿರುವ ಬ್ರೆಜಿಲ್ ನ ಪೀಲೆ ನಿಧನಕ್ಕೆ ಕ್ರೀಡಾ ಲೋಕ ಕಂಬನಿ ಮಿಡಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ