ಕ್ರೀಡೆ ಬದ್ಧತೆ ಮತ್ತು ತ್ಯಾಗವನ್ನು ಅಪೇಕ್ಷಿಸುತ್ತದೆ ಮತ್ತು ಕೆಲವೊಮ್ಮೆ ಅದೃಷ್ಟ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಬಗ್ಗೆ ಚರ್ಚಿಸುತ್ತಿದ್ದ ಅವರು, ನಾನು ಮತ್ತು ಅಣ್ಣ ಇಬ್ಬರು ಕ್ರೀಡೆಯಲ್ಲಿ ಮುಂದಿದ್ದೆವು. ಆತ ಓದಿನಲ್ಲೂ ಜಾಣನಾಗಿದ್ದ. ಆದರೆ ನನಗೆ ಓದು ತಲೆಗೆ ಹತ್ತುತ್ತಿರಲಿಲ್ಲ. ಇದೇ ನನಗೆ ಅದೃಷ್ಟವಾಯಿತು. ಐಐಟಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೇ ನಾನು ಯಶಸ್ವಿ ಕ್ರೀಡಾಪಟುವಾಗಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಅಣ್ಣ ರಾಜ್ಯ ಮಟ್ಟದಲ್ಲಿ ಚಾಂಪಿಯನ್ ಆಗಿದ್ದ. ಐಐಟಿ ಪರೀಕ್ಷೆ ಬರೆದಿದ್ದ ಆದ ತೇರ್ಗಡೆಯಾದ. ಹೀಗಾಗಿ ಐಐಟಿ ಸೇರಿದ ಆತ ಆಟವನ್ನು ನಿಲ್ಲಿಸಿದ. ನಾನು ಕೂಡ ಎಂಜಿನಿಯರಿಂಗ್ ಪರೀಕ್ಷೆ ಬರೆದು ಫೇಲಾದೆ. ಹೀಗಾಗಿ ಕ್ರೀಡೆಯಲ್ಲಿ ಮುಂದುವರೆದೆ. ಈಗ ನಾನು ಎಲ್ಲಿ ನಿಂತಿದ್ದೇನೆ ನೋಡಿ. ನನ್ನ ಮಟ್ಟಿಗೆ ಹೇಳುವುದಾದರೆ ನಮಗೆ ಬದ್ಧತೆ ಇರಬೇಕು ಮತ್ತು ಕೆಲವೊಮ್ಮೆ ಅದೃಷ್ಟ ಕೂಡ ಇರಬೇಕು ಎಂದು ನಗುತ್ತಾರೆ 42ರ ಗೋಪಿಚಂದ್.