ಕಾಮನ್ ವೆಲ್ತ್ ಗೇಮ್ಸ್: ಟ್ರಿಪಲ್ ಜಂಪ್ ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ

ಭಾನುವಾರ, 7 ಆಗಸ್ಟ್ 2022 (16:56 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ನಲ್ಲಿ ಭಾರತೀಯ ತಾರೆಗಳ ಪರಾಕ್ರಮ ಇಂದೂ ಮುಂದುವರಿದಿದೆ. ಟ್ರಿಪಲ್ ಜಂಪ್ ವಿಭಾಗದಲ್ಲಿ ಭಾರತದ ಎಲ್ಡೋಸ್ ಪೌಲ್ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ವಿಶೇಷವೆಂದರೆ ಈ ವಿಭಾಗದಲ್ಲಿ ಬೆಳ‍್ಳಿ ಪದಕವೂ ಭಾರತದ ಪಾಲಾಗಿದೆ. ಎಲ್ಡೋಸ್ ಪೌಲ್ 17.03 ಮೀ.ಜಿಗಿದು ಚಿನ್ನ ಗೆದ್ದರೆ ಭಾರತದ ಇನ್ನೊಬ್ಬ ಸ್ಪರ್ಧಿ ಅಬ್ದುಲ್ಲಾ 17.02 ಮೀ. ಜಿಗಿದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಟ್ರಿಪಲ್ ಜಂಪ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಎಲ್ಡೋಸ್ ಅವರದ್ದಾಯಿತು. ಚಿನ್ನ, ಬೆಳ್ಳಿ ಗೆದ್ದ ಭಾರತೀಯ ಜೋಡಿ ಮೈದಾನವಿಡೀ ಭಾರತೀಯ ಧ‍್ವಜ ಹಿಡಿದು ಕುಣಿದಾಡಿ ಸಂಭ್ರಮಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ