ಐಪಿಎಲ್ 14 ಕ್ಕೆ ತಯಾರಿ: ಸಿಎಸ್ ಕೆಯೇ ಫಸ್ಟ್

ಶನಿವಾರ, 24 ಜುಲೈ 2021 (12:13 IST)
ಚೆನ್ನೈ: ಯುಎಇನಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಐಪಿಎಲ್ 14 ರ ಉಳಿದ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಲ್ಲರಿಗಿಂತ ಮೊದಲು ದುಬೈ ತಲುಪಲಿದೆ ಎನ್ನಲಾಗಿದೆ.


ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಆಗಸ್ಟ್ 20 ರ ಬಳಿಕ ದುಬೈ ವಿಮಾನವೇರಲಿದ್ದಾರೆ ಎಂದು ವರದಿಯಾಗಿದೆ. ಕೇವಲ ಧೋನಿ ತಂಡ ಮಾತ್ರವಲ್ಲ, ಆರ್ ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೂ ಆಗಸ್ಟ್ ನಲ್ಲೇ ಅರಬರ ನಾಡಿಗೆ ಬಂದಿಳಿಯಲು ಯೋಜನೆ ಹಾಕಿಕೊಂಡಿದೆಯಂತೆ.

ಮೊದಲೇ ಇಲ್ಲಿಗೆ ಬಂದು ಸಿದ್ಧತೆ ನಡೆಸಲು ಈ ತಂಡಗಳು ತೀರ್ಮಾನಿಸಿವೆ ಎನ್ನಲಾಗಿದೆ. ಕಳೆದ ಬಾರಿಯೂ ಸಿಎಸ್ ಕೆಯೇ ಮೊದಲನೆಯ ತಂಡವಾಗಿ ತಯಾರಿ ಶುರು ಮಾಡಿತ್ತು. ಸದ್ಯಕ್ಕೆ ರಾಷ್ಟ್ರೀಯ ತಂಡದಲ್ಲಿ ಆಡದ ಆಟಗಾರರು ಐಪಿಎಲ್ ಕ್ಯಾಂಪ್ ಸೇರಿಕೊಳ್ಳುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ