ಸೈನಾಗೆ ಆಟದಲ್ಲಿ ಅಷ್ಟೊಂದು ಕೌಶಲ್ಯವಿಲ್ಲ, ಆದರೆ ಅಂಗಳದಲ್ಲಿ ವೇಗದ ಚಲನೆ

ಶನಿವಾರ, 20 ಫೆಬ್ರವರಿ 2016 (16:54 IST)
ಐದು ಬಾರಿ ವಿಶ್ವಚಾಂಪಿಯನ್ ಮತ್ತು ಒಲಿಂಪಿಕ್ ಮಾಜಿ ಚಾಂಪಿಯನ್ ಪಾರ್ಕ್ ಜೂ ಬಾಂಗ್ ಭಾರತದ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧುವನ್ನು ಕುರಿತು ಆಸಕ್ತಿದಾಯಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜಪಾನ್ ತಂಡದ ಮುಖ್ಯ ಕೋಚ್ ಆಗಿರುವ ಪಾರ್ಕ್ ಅವರ ಪ್ರಕಾರ, ಸೈನಾ ಆಟ ಅಷ್ಟೊಂದು ಕೌಶಲ್ಯದಿಂದ ಕೂಡಿಲ್ಲ. ಆದರೆ ಅಂಗಳದಲ್ಲಿ ವೇಗವಾದ ಚಲನೆ ಮತ್ತು ಗೆಲ್ಲುವ ಛಲ ಹೊಂದಿದ್ದಾರೆಂದು ತಿಳಿಸಿದರು.
 
ಸಿಂಧುಗೆ ಅಂಗಳದಲ್ಲಿ ಚಲನೆಯ ಸಮಸ್ಯೆಯಿದೆ ಎಂದು ಪಾರ್ಕ್ ಹೇಳಿ ಅದೇ ಗಳಿಗೆಯಲ್ಲಿ ಸಿಂಧು ಪರಿಣಾಮಕಾರಿ ದಾಳಿಯ ಆಟ ಆಡಬಲ್ಲರು ಎಂದು ಶ್ಲಾಘಿಸಿದರು. ಪೂರ್ಣ ಸಾಮರ್ಥ್ಯದಿಂದ ಕೂಡಿದ್ದಾಗ ಸಿಂಧು ಉತ್ತಮ ದಾಳಿಯ ಆಟ ಆಡಬಲ್ಲರು. ಅವರು ಉತ್ತಮ ಎತ್ತರ ಹೊಂದಿದ್ದು, ಶಟಲ್ ಅನ್ನು ರಭಸವಾಗಿ ಬೀಸಲು ಬಳಸುತ್ತಾರೆ ಎಂದು ಹೇಳಿದರು.

  9 ಬಾರಿ ಅಖಿಲ ಇಂಗ್ಲೆಂಡ್   ಡಬಲ್ಸ್ ಚಾಂಪಿಯನ್ ಆಗಿರುವ ಪಾರ್ಕ್ ಜೂ ಭಾರತದ ಬ್ಯಾಟಿಂಗ್ ಮುಖವನ್ನು ಬದಲಿಸಿದ ಪುಲ್ಲೇಲಾ ಗೋಪಿಚಂದ್ ಶ್ರಮವನ್ನು ಶ್ಲಾಘಿಸಿದರು. ಮೊದಲು ಪ್ರಕಾಶ್ ಪಡುಕೋಣೆ ಬಳಿಕ ಗೋಪಿಚಂದ್ ಬ್ಯಾಡ್ಮಿಂಟನ್ ರಂಗಕ್ಕೆ ಪ್ರವೇಶ ಮಾಡಿದರು. ಅವರ ವೃತ್ತಿಜೀವನ ಗಾಯಗಳಿಂದ ಮೊಟಕಾದರೂ ಭಾರತದ ಬ್ಯಾಡ್ಮಿಂಟನ್ ಮುಖವನ್ನೇ ಬದಲಿಸಿದರು ಎಂದು ಪಾರ್ಕ್ ಜೂ ಅಭಿಪ್ರಾಯಪಟ್ಟರು.
 

ವೆಬ್ದುನಿಯಾವನ್ನು ಓದಿ