ಶಿಕ್ಷೆಯ ಭೀತಿಗೆ ಸಿಲುಕಿದ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕ್ ಬಾತ್ರಾ

ಬುಧವಾರ, 28 ಜುಲೈ 2021 (09:00 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕ್ ಬಾತ್ರಾಗೆ ಈಗ ಶಿಕ್ಷೆಯ ಭೀತಿ ಎದುರಾಗಿದೆ.


ಮಣಿಕ್ ಬಾತ್ರಾ ಒಲಿಂಪಿಕ್ಸ್ ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್ ಪಂದ್ಯದ ವೇಳೆ ಕೋಚ್ ಇಲ್ಲದೇ ಆಡಿದ್ದರು. ವೈಯಕ್ತಿಕ ಕೋಚ್ ಗೆ ಸಂಘಟಕರು ಒಪ್ಪಿಗೆ ನೀಡಿರಲಿಲ್ಲ. ರಾಷ್ಟ್ರೀಯ ಕೋಚ್ ನ ಸಲಹೆ ಪಡೆಯಲು ಮಣಿಕ್ ನಿರಾಕರಿಸಿದ್ದರು.

ಇದೀಗ ಟೇಬಲ್ ಟೆನಿಸ್ ಫೆಡರೇಷನ್ ಕೆಂಗಣ್ಣಿಗೆ ಗುರಿಯಾಗಿದೆ. ಮಣಿಕ್ ಮಾಡಿದ್ದು ವೃತ್ತಿಪರತೆಯಲ್ಲ. ಆಕೆ ಭಾರತಕ್ಕೆ ಮರಳಿದ ಮೇಲೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಈ ಬಗ್ಗೆ ಫೆಡರೇಷನ್ ನ ಸಮಿತಿ ವಿಚಾರಣೆ ನಡೆಸಲಿದೆ ಎಂದು ಫೆಡರೇಷನ್ ಕಾರ್ಯದರ್ಶಿ ಅರುಣ್ ಕುಮಾರ್ ಬ್ಯಾನರ್ಜಿ ಹೇಳಿದ್ದಾರೆ. ಮೂರನೇ ಸುತ್ತಿನಲ್ಲಿ ಸೋತು ಕೂಟದಿಂದ ನಿರ್ಗಮಿಸಿದ್ದ ಮಣಿಕ್ ಗೆ ಈಗ ಶಿಸ್ತು ಕ್ರಮದ ಭೀತಿ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ