ನೀರಜ್ ಚೋಪ್ರಾ ಜ್ವಾವೆಲಿನ್ ಹರಾಜು: 10 ಕೋಟಿ ದಾಟಿದ ಬೆಲೆ!

ಭಾನುವಾರ, 19 ಸೆಪ್ಟಂಬರ್ 2021 (09:26 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದ ಭಾರತದ ಕ್ರೀಡಾ ತಾರೆಗಳು ತಮ್ಮ ಕ್ರೀಡಾ ಪರಿಕರಗಳನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದರು. ಅದನ್ನೀಗ ಒಳ್ಳೆಯ ಉದ್ದೇಶಕ್ಕೆ ಹಣ ಸಂಗ್ರಹಿಸಲು ಹರಾಜಿಗೊಳಪಡಿಸಲಾಗಿದೆ.
Photo Courtesy: Twitter


ನೀರಜ್ ಚೋಪ್ರಾ ಜ್ವಾವೆಲಿನ್, ಬಾಕ್ಸಿಂಗ್ ತಾರೆಯರು ನೀಡಿದ್ದ ಗ್ಲೌಸ್ ಗಳು, ಬ್ಯಾಡ್ಮಿಂಟನ್ ತಾರೆ ಸಿಂಧು ನೀಡಿದ್ದ ರಾಕೆಟ್ ಸೇರಿದಂತೆ ಉಡುಗೊರೆಯಾಗಿ ಬಂದ ವಸ್ತುಗಳನ್ನು ಸಂಸ್ಕೃತಿ ಸಚಿವಾಲಯ ಆನ್ ಲೈನ್ ಹರಾಜಿಗಟ್ಟಿದೆ. ಇದು ಅಕ್ಟೋಬರ್ 7 ರವರೆಗೂ ಜಾರಿಯಲ್ಲಿರಲಿದೆ.

ಈಗಾಗಲೇ ಬಾಕ್ಸರ್ ಲವ್ಲಿನಾ ನೀಡಿದ್ದ ಗ್ಲೌಸ್ ಗಳು 10 ಕೋಟಿ ರೂ. ಸನಿಹ ಬೆಲೆ ಪಡೆದಿದೆ. ಇನ್ನು, ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಜ್ವಾವೆಲಿನ್ ಬೆಲ್ 10 ಕೋಟಿ ದಾಟಿ ಮುನ್ನುಗ್ಗುತ್ತಿದೆ. ಎಂಬ ವೆಬ್ ಸೈಟ್ ನಲ್ಲಿ ಯಾರು ಬೇಕಾದರೂ ಹರಾಜಜಿನಲ್ಲಿ ಪಾಲ್ಗೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ