ಸೈನಾ ನೆಹ್ವಾಲ್ ವಿಶ್ ಮಾಡಿಲ್ವಾ? ಪಿ.ವಿ. ಸಿಂಧು ಹೇಳಿದ್ದು ಕೇಳಿದ್ರೆ ಶಾಕ್!
ಗೋಪಿ ಸರ್ (ಪುಲ್ಲೇಲ ಗೋಪಿಚಂದ್) ನನಗೆ ಮೆಸೇಜ್ ಮಾಡಿ ಕಂಗ್ರಾಟ್ಸ್ ಎಂದಿದ್ದಾರೆ. ಇನ್ನೂ ಅನೇಕರು ವಿಶ್ ಮಾಡಿದ್ದಾರೆ. ನಾನಿನ್ನೂ ಸೋಷಿಯಲ್ ಮೀಡಿಯಾ ಸರಿಯಾಗಿ ನೋಡಿಲ್ಲ. ಒಂದೊಂದಾಗಿ ಮೆಸೇಜ್ ಗಳನ್ನು ನೋಡುತ್ತಿದ್ದಾನೆ. ಸೈನಾ ನನಗೆ ಮೆಸೇಜ್ ಮಾಡಿಲ್ಲ. ನಾವಿಬ್ಬರೂ ಹೆಚ್ಚು ಮಾತನಾಡಲ್ಲ. ಬಹುಶಃ ಅದಕ್ಕೇ.. ಎಂದಿದ್ದಾರೆ. ಇಬ್ಬರೂ ತಾರೆಯರ ಶೀತಲ ಸಮರ ಎಲ್ಲರಿಗೂ ಚಿರಪರಿಚಿತವೇ. ಈಗ ಸೈನಾ ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ತೋರಿದ ಎಲ್ಲಾ ತಾರೆಯರಿಗೆ ಶುಭ ಹಾರೈಸಿದ್ದಾರೆ. ಆದರೆ ಸಿಂಧುವಿಗೆ ಮಾತ್ರ ವಿಶ್ ಮಾಡಿಲ್ಲ. ಆದರೆ ಅವರ ಪತಿ ಕಶ್ಯಪ್ ಮಾತ್ರ ಟ್ವೀಟ್ ಮೂಲಕ ಸಿಂಧುವಿಗೆ ಶುಭ ಹಾರೈಸಿದ್ದರು.