ಹೈದರಾಬಾದ್: ಒಲಿಂಪಿಕ್ಸ್ ನಲ್ಲಿ ಎರಡನೇ ಪದಕ ಗೆದ್ದ ಬೆನ್ನಲ್ಲೇ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಜಾಹೀರಾತುದಾರರಿಗೆ ಅಚ್ಚುಮೆಚ್ಚಿನ ತಾರೆಯಾಗಿದ್ದಾರೆ.
ಈ ನಡುವೆ ಕೆಲವು ಕಂಪನಿಗಳು ತಮ್ಮ ಜಾಹೀರಾತಿನಲ್ಲಿ ಸಿಂಧು ಫೋಟೋವನ್ನು ಅವರ ಅನುಮತಿಯಿಲ್ಲದೇ ಬಳಸಿವೆ. ಅಂತಹ ಸುಮಾರು 15 ಕಂಪನಿಗಳ ವಿರುದ್ಧ ಈಗ ಸಿಂಧು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ತಮ್ಮ ಅನುಮತಿಯಿಲ್ಲದೇ ಫೋಟೋ, ವಿಡಿಯೋ ಬಳಸಿದ 15 ಕಂಪನಿಗಳಿಗೆ ಲೀಗಲ್ ನೋಟಿಸ್ ನೀಡಲು ಸಿಂಧು ನಿರ್ಧರಿಸಿದ್ದಾರೆ. ವಿಶೇಷವೆಂದರೆ ಇದರಲ್ಲಿ ಎಸ್ ಬಿಐ ಬ್ಯಾಂಕ್, ಕೊಟಾಕ್ ಮಹೀಂದ್ರ ಬ್ಯಾಂಕ್, ಯೂಕೋ ಬ್ಯಾಂಕ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್ ಮುಂತಾದ ಪ್ರಮಖ ಸಂಸ್ಥೆಗಳಿವೆ. ಉತ್ಪನ್ನಗಳ ಪ್ರಚಾರಕ್ಕೆ ಹೀಗೆ ಒಬ್ಬ ಸೆಲೆಬ್ರಿಟಿಯ ಅನುಮತಿಯಿಲ್ಲದೇ ಹೆಸರು, ಫೋಟೋ ಬಳಸುವುದು ನಿಯಮಗಳ ಉಲ್ಲಂಘನೆಯಾಗುತ್ತದೆ.