ಬ್ಯಾಡ್ಮಿಂಟನ್: ಕಂಚು ಗೆದ್ದ ಪಿ.ವಿ. ಸಿಂಧು

ಭಾನುವಾರ, 1 ಆಗಸ್ಟ್ 2021 (17:53 IST)
ಟೋಕಿಯೋ: ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಪಿ.ವಿ. ಸಿಂಧು ಚೀನಾದ ಬಿ.ಜೆ. ಹೇ ವಿರುದ್ಧ 21-13, 21-15 ಅಂತರದ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.


ಇಂದು ಭರ್ಜರಿ ಫಾರ್ಮ್ ನಲ್ಲಿದ್ದವರಂತೆ ಕಂಡುಬಂದ ಸಿಂಧು ಸ್ಮ್ಯಾಶ್, ಕ್ರಾಸ್ ಕೋರ್ಟ್ ಶಾಟ್ ಗಳ ಮೂಲಕ ಎದುರಾಳಿಗೆ ಭರ್ಜರಿ ಪ್ರತ್ಯುತ್ತರ ನೀಡಿದರು. ಮೊದಲ ಸೆಟ್ ನಲ್ಲಿ ಒಂದು ಹಂತದಲ್ಲಿ ಸ್ಕೋರ್ ಸಮಬಲವಾಗಿದ್ದರೂ ಬಳಿಕ ಸಿಂಧು ಆಕ್ರಮಣಕಾರಿ ಹೊಡೆತಗಳ ಮೂಲಕ ಗೆಲುವು ಕಂಡರು.

ನೆಟ್ ಶಾಟ್ ಗಳು ಸಿಂಧುವಿನ ದೌರ್ಬಲ್ಯವಾಯಿತು. ಇದರಿಂದಾಗಿ ಕೆಲವೊಂದು ಅಂಕಗಳನ್ನು ಕಳೆದುಕೊಂಡರು. ಆದರೆ ಅಂತಿಮವಾಗಿ ಆಕ್ರಮಣಕಾರಿ ಹೊಡೆತಗಳ ಮೂಲಕ ಪಂದ್ಯ ತಮ್ಮದಾಗಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ