ಸ್ಪೇನ್‌ನ 21 ವರ್ಷದ ಅಲ್ಕರಾಜ್‌ ಮುಡಿಗೆ ಫ್ರೆಂಚ್‌ ಓಪನ್‌ ಕಿರೀಟ

sampriya

ಸೋಮವಾರ, 10 ಜೂನ್ 2024 (14:32 IST)
Photo By X
ಪ್ಯಾರಿಸ್‌: ಸ್ಪೇನ್‌ನ 21 ವರ್ಷದ ಆಟಗಾರ ಕಾರ್ಲೋಸ್‌ ಅಲ್ಕರಾಜ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಅವರನ್ನು  ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಪ್ಯಾರಿಸ್‌ನ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಅಲ್ಕರಾಜ್‌ ಅವರು 6-3, 2-6, 5-7, 6-1, 6-2ರಿಂದ ನಾಲ್ಕನೇ ಶ್ರೇಯಾಂಕದ ಜ್ವೆರೇವ್‌ ಅವರನ್ನು ಹಿಮ್ಮೆಟ್ಟಿಸಿದರು. ಇವರಿಬ್ಬರ ನಡುವೆ ನಾಲ್ಕು ಗಂಟೆ 19 ನಿಮಿಷಗಳ ಕಾಲ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು.

2022ರಲ್ಲಿ ಅಮೆರಿಕ ಓಪನ್‌ ಪ್ರಶಸ್ತಿ ಗೆದ್ದಿದ್ದ ಅಲ್ಕರಾಜ್, ಕಳೆದ ವರ್ಷ ವಿಂಬಲ್ಡನ್‌ ಕಿರೀಟವನ್ನು ಜಯಿಸಿದ್ದರು. ಮೂರು ಮಾದರಿಗಳ ಕೋರ್ಟ್‌ನಲ್ಲಿ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹಿರಿಮೆಗೆ ಅವರು ಪಾತ್ರವಾದರು. ಮುಂದಿನ ವರ್ಷ ಆಸ್ಟ್ರೇಲಿಯನ್ ಓಪನ್‌ ಗೆದ್ದರೆ, ನಾಲ್ಕೂ ಗ್ರ್ಯಾನ್‌ಸ್ಲಾಮ್ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ಪೋಲೆಂಡ್‌ನ ಇಗಾ ಶ್ವಾಂಟೆಕ್‌ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಇಟಲಿಯ ಜಾಸ್ಮಿನ್ ಪಾವ್ಲೀನಿ ರನ್ನರ್ಸ್‌ ಅಪ್‌ ಆದರು. ಮಹಿಳೆಯರ ಡಬಲ್ಸ್‌ನಲ್ಲಿ
ಅಮೆರಿಕದ ಕೊಕೊ ಗಾಫ್‌ ಅವರು ಜೆಕ್‌ ಗಣರಾಣ್ಯದ ಕಟೆರಿನಾ ಸಿನಿಯಾಕೋವಾ ಚಾಂಪಿಯನ್‌ ಆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ