ಅಮೆರಿಕ: ಭಾರತದ ಟಿನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿಯು ಮಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಫೈನಲ್‌ನಲ್ಲಿ ಕನ್ನಡಿಗ ರೋಹನ್ ಮತ್ತು ಎಬ್ಡೆನ್ ಜೋಡಿ ಕ್ರೊರೇಷಿಯಾದ ಇವಾನ್ ಡೊಡಿಗ್ ಮತ್ತು ಅಮೆರಿಕದ ಆಸ್ಟಿನ್ ಕ್ರಾಜಿಕ್ ಅವರನ್ನು 6-7(3) 6-3 (10-6) ಸೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆಯಿತು.
ಈ ಜೋಡಿ ಸೆಮಿಫೈನಲ್ ಹಣಾಹಣಿಯಲ್ಲಿ ಸ್ಪೇನ್‌ನ ಮಾರ್ಸೆಲ್ ಗ್ರಾನೊಲ್ಲರ್ಸ್ ಮತ್ತು ಅರ್ಜೆಂಟೀನಾದ ಹೊರಾಸಿಯೊ ಜಿಬಾಲ್ಲೋಸ್ ಅವರನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿ ಫೈನಲ್ ಪ್ರವೇಶಿಸಿತ್ತು.
ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ರೋಹನ್, ಈ ಗೆಲುವಿನ ಮೂಲಕ ಅಗ್ರಸ್ಥಾನವನ್ನು ಮರಳಿ ಪಡೆದಿದ್ದಾರೆ. ಆಸ್ಟ್ರೇಲಿಯನ್ ಓಪನ್ ಗೆಲುವಿನ ನಂತರ, 44 ವರ್ಷದ ಬೋಪಣ್ಣ ಎಟಿಪಿ ಶ್ರೇಯಾಂಕದಲ್ಲಿ ವಿಶ್ವದ ನಂ.1 ಸ್ಥಾನಕ್ಕೆ ಏರಿದ್ದರು.
ಬೋಪಣ್ಣ ಪಾಲಿಗೆ ಇದು 14ನೇ ಎಟಿಪಿ ಮಾಸ್ಟರ್ಸ್ ಫೈನಲ್ ಹಾಗೂ ಮಯಾಮಿಯಲ್ಲಿ ನಡೆದ ಮೊದಲ ಫೈನಲ್ ಪಂದ್ಯವಾಗಿತ್ತು. ಅವರು ಈವರೆಗೆ 25 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.