ಸೈನಾ ನೆಹ್ವಾಲ್ ಹಿಂದೆ ಬರೋದಿಕ್ಕೆ ಶುರು ಮಾಡಿದ್ದಾಳೆ ಈ ಬೆಡಗಿ!

ಶನಿವಾರ, 9 ಸೆಪ್ಟಂಬರ್ 2017 (08:15 IST)
ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅದೆಷ್ಟೋ ಮಂದಿಗೆ ರೋಲ್ ಮಾಡೆಲ್. ಆದರೆ ಈ ಬಾಲಿವುಡ್ ನಟಿ ಮಾತ್ರ ಸೈನಾ ಆಡಿದ ಹಾಗೇ ಆಡಲು ಶುರು ಮಾಡಿದ್ದಾಳೆ!  ಕಾರಣ ಏನು ಗೊತ್ತಾ?

 
ಇವರು ಶ್ರದ್ಧಾ ಕಪೂರ್. ಬಾಹುಬಲಿ ಪ್ರಭಾಸ್ ರ ಹೊಸ ಚಿತ್ರ ಸಾಹೋಗೆ ಇವರೇ ನಾಯಕಿ. ಇದರ ಜತೆಗೆ ಈಕೆ ಸೈನಾ ನೆಹ್ವಾಲ್ ಅವರ ಜೀವನಾಧಾರಿತ ಚಿತ್ರದಲ್ಲಿ ಬ್ಯಾಡ್ಮಿಂಟನ್ ತಾರೆಯ ಪಾತ್ರ ನಿರ್ವಹಿಸಲಿದ್ದಾಳೆ.

ಅದೇ ಕಾರಣಕ್ಕೆ ಶ್ರದ್ಧಾ ಈಗ ಸೈನಾ ಜತೆ ಬ್ಯಾಡ್ಮಿಂಟನ್ ಅಂಕಣಕ್ಕೆ ಲಗ್ಗೆಯಿಟ್ಟಿದ್ದಾಳೆ. ತನ್ನ ಪಾತ್ರದ ಬಗ್ಗೆ ಗಂಭೀರವಾಗಿ ತೊಡಗಿಸಿಕೊಂಡಿರುವ ಶ್ರದ್ಧಾ ಸೈನಾರ ಎಲ್ಲಾ ಹಾವಬಾವಗಳನ್ನು ಕಲಿಯಲು ಅವರ ಜತೆ ಅಕಾಡೆಮಿಯಲ್ಲಿ ಅಕ್ಷರಶಃ ಅಭ್ಯಾಸವನ್ನೇ ನಡೆಸುತ್ತಿದ್ದಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ         

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ