ಬಾಕ್ಸಿಂಗ್‌ ಸ್ಪರ್ಧೆಯ ನೇರ ಪ್ರಸಾರದಲ್ಲೇ ಚಾಂಪಿಯನ್‌ ಹೃದಯಾಘಾತದಿಂದ ಸಾವು!

ಗುರುವಾರ, 19 ಮೇ 2022 (17:17 IST)
ರಿಂಗ್‌ ನಲ್ಲಿ ಸೋಲರಿಯದ ಬಾಕ್ಸರ್‌ ಎಂದೇ ಹೆಸರಾಗಿದ್ದ 38 ವರ್ಷದ ಜರ್ಮನಿಯ ಚಾಂಪಿಯನ್‌ ಅಖಾಡದಲ್ಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಆಘಾತಕಾರಿ ಘಟನೆ ಮ್ಯೂನಿಚ್‌ ನಲ್ಲಿ ಸಂಭವಿಸಿದೆ.
ಬಾಕ್ಸಿಂಗ್‌ ರಿಂಗ್‌ ನಲ್ಲಿ ಕಳೆದುಕೊಂಡ ನಂತರ ಸಂಭವಿಸಿದ ಎರಡನೇ ಘಟನೆ ಇದಾಗಿದೆ. ಶನಿವಾರ ಉಗಾಂಡದ ಸ್ಪರ್ಧಿ ಹಮ್ಜಾ ವಂಡೇರಾ ವಿರುದ್ಧದ ಪಂದ್ಯದಲ್ಲಿ ದಿಢೀರನೆ ಕುಸಿದು ಬಿದ್ದ ಅಲೌರಾ ಮೂಲದ ಮುಸಾ ಅಸ್ಕಾನ್‌ ಯಮಕ್‌ ಮೃತಪಟ್ಟಿದ್ದಾರೆ.
ಯುರೋಪಿಯನ್‌ ಮತ್ತು ಏಷ್ಯನ್‌ ಚಾಂಪಿಯನ್‌ ಆಗಿದ್ದ ಅತ್ಯಂತ ಚಿಕ್ಕಿ ವಯಸ್ಸಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಟರ್ಕಿ ಅಧಿಕಾರಿಗಳು ಟ್ವಿಟರ್‌ ನಲ್ಲಿ ಘೋಷಿಸಿದ್ದಾರೆ.
ಬಾಕ್ಸಿಂಗ್‌ ಸ್ಪರ್ಧೆ ಟಿವಿಯಲ್ಲಿ ನೇರ ಪ್ರಸಾರವಾಗುತ್ತಿತ್ತು. ಪಂದ್ಯದ ಎರಡನೇ ಸುತ್ತಿನಲ್ಲಿ ಎದುರಾಳಿಯಿಂದ ದೊಡ್ಡ ಹೊಡೆತ ತಿಂದಿದ್ದ ಮುಸಾ ಅಸ್ಕಾನ್‌ ಯಮಕ್‌, ಮೂರನೇ ಸುತ್ತು ಆರಂಭಕ್ಕೂ ಕೆಲವೇ ಕ್ಷಣಗಳ ಮುನ್ನ ಕುಸಿದುಬಿದ್ದಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪ್ರಥಮ ಚಿಕಿತ್ಸೆ ನೀಡಿ ಮುಸಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ