ಜಾತಿ ನಿಂದನೆಗೊಳಗಾಗಿದ್ದ ಹಾಕಿ ಪ್ಲೇಯರ್ ವಂದನಾಗೆ ಗೌರವ ನೀಡಿದ ಉತ್ತರಾಖಂಡ ಸರ್ಕಾರ

ಸೋಮವಾರ, 9 ಆಗಸ್ಟ್ 2021 (09:20 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸೋತ ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ತಮ್ಮ ನೆರೆಹೊರೆಯವರಿಂದಲೇ ಜಾತಿ ನಿಂದನೆಗೊಳಗಾಗಿದ್ದು ಭಾರೀ ಸುದ್ದಿಯಾಗಿತ್ತು.


ಇದೀಗ ಅದೇ ವಂದನಾಗೆ ತವರು ಉತ್ತರಾಖಂಡ ರಾಜ್ಯ ಸರ್ಕಾರ ತಕ್ಕ ಸನ್ಮಾನ ಮಾಡಿ ಗೌರವಿಸಿದೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಮಿ ವಂದನಾ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಗೌರವಿಸಿದ್ದಾರೆ.  ಅಲ್ಲದೆ, ವಂದನಾರನ್ನು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಯಭಾರಿಯಾಗಿ ನೇಮಿಸಿ ಗೌರವ ನೀಡಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಸೋತಾಗ ವಂದನಾ ನೆರೆಹೊರೆಯ ಮೇಲ್ಜಾತಿಯ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಲ್ಲದೆ, ಆಕೆಯ ಕುಟುಂಬದ ಮೇಲೆ ದೌರ್ಜನ್ಯ ನಡೆಸಿದ್ದರು ಎಂದು ಸುದ್ದಿಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ