ಇದು ಸತ್ಯವಂತೆ ರೀ… ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದ್ಯಂತೆ…!
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದೆಯಂತೆ. ಹೌದು ಹೀಗಂತ ಕಂಟೆಸ್ಟೆಂಟ್ ಗಳೇ ಹೇಳಿದ್ದಾರೆ. ಜೆಕೆ ದೆವ್ವವನ್ನ ನೋಡಿದ್ದಾರಂತೆ…
ಇದನ್ನ ಗಮನಿಸಿದ ಬಾರ್ಬಿ ಡಾಲ್ ಏನಾಯ್ತು ಎಂದಾಗ ಜೆಕೆ ಇಲ್ಲಿ ದೆವ್ವ ಇದೆ. ಸೀರಿಯಸ್ ಆಗಿ ಅಲ್ಲಿ ನೋಡು. ನಂಗೆ ಕಾಣ್ತಿದೆ ಅಂದ್ರು. ಇದನ್ನ ಕೇಳಿದ ನಿವೇದಿತಾ, ಅನುಪಮಾ ಕ್ಷಣಕಾಲ ಭಯಭೀತರಾಗಿದ್ರು. ನಿವೇದಿತಾ ಅಳಲು ಸಹ ಮುಂದಾಗಿದ್ರು. ಮಾತು ಶುರುಮಾಡಿದ ಜೆಕೆ ನನ್ನ ಕಣ್ಣಲ್ಲಿ ನೀರು ಬರ್ತಿದ್ಯಾ ಅಂದಾಗ ನಿವೇದಿತಾ ಹೌದು ಎಂದ್ರು. ನೆಗೆಟಿವ್ ಎನರ್ಜಿ ಇದ್ರೆ ಮಾತ್ರ ಹಾಗೆ ಕಣ್ಣೀರು ಬರೋದು ಜೆಕೆ ಹೇಳಿದ ಕೂಡ್ಲೆ, ಇವತ್ತು ನಾನು ಇಲ್ಲಿ ಮಲಗೋದೆ ಇಲ್ಲ ಎಂದರು. ಆಗ ಜೆಕೆ ನಕ್ಕು ಸುಳ್ಳು ಹೇಳಿದ್ದಾಗಿ ಹೇಳಿ ಸುಮ್ಮನಾದ್ರು.