ಹೊಸ ದಾಖಲೆ ಮಾಡಿದ ಜೊತೆ ಜೊತೆಯಲಿ ಧಾರವಾಹಿಯ ಟೈಟಲ್ ಹಾಡು
ಆರಂಭದ ವಾರದಿಂದಲೇ ಸೆನ್ಸೇಷನಲ್ ಟಿಆರ್ ಪಿ ಪಡೆದು ದಾಖಲೆ ಮಾಡಿದ್ದ ಜೊತೆ ಜೊತೆಯಲಿ ಧಾರವಾಹಿಯ ಟೈಟಲ್ ಹಾಡು ಈಗ ಹೊಸ ದಾಖಲೆ ಮಾಡಿದೆ.
ಅನಿರುದ್ಧ್ ಜತ್ಕಾರ್-ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿರುವ ಜೊತೆ ಜೊತೆಯಲಿ ಧಾರವಾಹಿಯ ಟೈಟಲ್ ಹಾಡು ಈಗ ಯೂ ಟ್ಯೂಬ್ ನಲ್ಲಿ 3 ಕೋಟಿ ವೀಕ್ಷಣೆ ಪಡೆದು ದಾಖಲೆ ಮಾಡಿದೆ. ಧಾರವಾಹಿ ಹಾಡೊಂದು ಇಷ್ಟು ಜನಪ್ರಿಯವಾಗಿದ್ದು ಇದೇ ಮೊದಲು. ಈಗಾಗಲೇ ಈ ಧಾರವಾಹಿ 711 ಸಂಚಿಕೆಗಳ ಪ್ರಸಾರ ಕಂಡಿದೆ.