ಮತ್ತೆ ಕಿರುತೆರೆಗೆ ಉಮಾಶ್ರೀ: ಯಾವ ಧಾರವಾಹಿಯಲ್ಲಿ ನಟಿಸ್ತಾರೆ ಗೊತ್ತಾ?
ಭಾನುವಾರ, 8 ಡಿಸೆಂಬರ್ 2019 (09:15 IST)
ಬೆಂಗಳೂರು: ನಟಿ ಉಮಾಶ್ರೀ ರಾಜಕೀಯದಿಂದಾಗಿ ಅಪರೂಪಕ್ಕೊಂದು ಸಿನಿಮಾ ಬಿಟ್ಟರೆ ಬಣ್ಣ ಹಚ್ಚಿದ್ದು ಕಡಿಮೆ. ಆದರೆ ಇದೀಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ.
ಕಿರುತೆರೆಯಲ್ಲಿ ಹಿಂದೆ ಕಿಚ್ಚು, ಅಮ್ಮ ನಿನಗಾಗಿ ಧಾರವಾಹಿಯಲ್ಲಿ ಉಮಾಶ್ರೀ ನಟಿಸಿದ್ದರು. ಅದಾದ ಬಳಿಕ ಈಗಲೇ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಡಿಸೆಂಬರ್ 23 ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಆರತಿಗೊಬ್ಬ ಕೀರುತಿಗೊಬ್ಬ ಧಾರವಾಹಿಯಲ್ಲಿ ಉಮಾಶ್ರೀ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದರಲ್ಲಿ ಕುಲವಧು ಧಾರವಾಹಿ ಖ್ಯಾತಿಯ ದೀಪಿಕಾ ನಾಯಕಿಯಾಗಿದ್ದಾರೆ.