ಯುಪಿಎಸ್‌ಸಿ ಪರೀಕ್ಷೆಯಲ್ಲಿ 95ನೇ ರ್ಯಾಂಕ್ ಪಡೆದ ಬೀದರನ ಹೆಮ್ಮೆಯ ಪುತ್ರ

ಶನಿವಾರ, 28 ಏಪ್ರಿಲ್ 2018 (12:54 IST)
ಭಾರತೀಯ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ 95ನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಮೊದಲ ಸ್ಥಾನ ಬೀದರ್ ನ ರಾಹುಲ್ ಸಿಂಧೆ ಪಡೆದಿದ್ದಾರೆ.
ಜಿಲ್ಲೆಯ ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿರುವ ಶಂಕರರಾವ್ ಶಿಂಧೆ ಹಾಗೂ ವಂದನಾ ಶಿಂಧೆ ಅವರ ಪುತ್ರ ರಾಹುಲ್ ಶಿಂಧೆ ಅವರಾಗಿದ್ದಾರೆ. 
 
ಬೀದರ್ ನಗರದ ಗುರುನಾನಕ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ  ಹೈದ್ರಾಬಾದ್‌ನ ಫಿಟ್ಜಿಿಯಲ್ಲಿ ಪಿಯುಸಿ ಮುಗಿಸಿರುವ ರಾಹುಲ್ ಶಿಂಧೆ ಮುಂಬೈಯಲ್ಲಿ ಐಐಟಿಯನ್ನೂ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. 
 
ಐಐಟಿ ಮುಗಿಸಿದಾಕ್ಷಣ ಅರಸಿ ಬಂದ ಸೌದಿ ಅರೇಬಿಯಾದ ಅಂತರರಾಷ್ಟ್ರೀಯ ಕಂಪನಿಯೊಂದರ ಹುದ್ದೆಯನ್ನು ತಂದೆಯ ಸಲಹೆಯಂತೆ ಕೈಬಿಟ್ಟು, ಜಿಲ್ಲಾಾಧಿಕಾರಿಯಾಗುವಂಥ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು.
 
ಕಳೆದ ವರ್ಷ 2017ರಲ್ಲಿಯೇ ಭಾರತೀಯ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ರ್ಯಾಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗುವ ಭಾಗ್ಯ ಪಡೆದಿದ್ದ ಅವರು ಡೆಹ್ರಾಡೂನ್‌ನಲ್ಲಿ ತರಬೇತಿ ಮುಗಿಸುವ ಹಂತದಲ್ಲಿದ್ದಾರೆ.
 
ಆದರೆ ಮತ್ತೊಂದು ಬಾರಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಇದೀಗ ಐಎಎಸ್ ಅಧಿಕಾರಿಯಾಗುವ ಪಾಲಕರ ಕನಸು ಈಡೇರಿಸುವಂಥ ರ್ಯಾಂಕ್ ಪಡೆದಿದ್ದು ಇಡೀ ಕುಟುಂಬದಲ್ಲಿ ಹರ್ಷ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ