ಇವತ್ತೇ ಸಿದ್ದು ಸಂಪುಟಕ್ಕೆ ಕ್ಲೈಮ್ಯಾಕ್ಸ್ : ಸಚಿವರು ಯಾರು?

ಶುಕ್ರವಾರ, 26 ಮೇ 2023 (07:40 IST)
ಬೆಂಗಳೂರು : ಪೂರ್ಣ ಪ್ರಮಾಣದ ಕ್ಯಾಬಿನೆಟ್ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದ್ದು ಶನಿವಾರ 24 ಸಂಭಾವ್ಯ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
 
ಬೆಳಗ್ಗೆ 11:45ಕ್ಕೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು ರಾಜ್ಯಪಾಲರ ಕಚೇರಿಯಿಂದ ಸಿಎಂ ಕಚೇರಿ ಸಮಯ ಪಡೆದಿದೆ. ಮುಂದಿನ ಎರಡೂವರೆ ವರ್ಷ ಯಾವುದೇ ತಕರಾರುಗಳಿಲ್ಲದೇ ಸರ್ಕಾರ ನಡೆಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ.

ಪ್ರಸ್ತುತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿದಂತೆ 10 ಮಂದಿ ಸಂಪುಟದಲ್ಲಿದ್ದು 34 ಸದಸ್ಯ ಬಲದ ಸಂಪುಟದಲ್ಲಿ 24 ಸ್ಥಾನಗಳು ಖಾಲಿಯಿದೆ. ಗುರುವಾರ ಸುದೀರ್ಘ ಸಭೆ ಬಳಿಕ ಅಂತಿಮ ಪಟ್ಟಿಗೆ ಮುದ್ರೆ ಬಿದ್ದಿದೆ. ವೇಣುಗೋಪಾಲ್ ನೇತೃತ್ವದಲ್ಲಿ ಇಂದು ಸಭೆ ನಡೆಸಿ ಖಾತೆಯನ್ನು ಹಂಚಿಕೆ ಮಾಡಲಾಗುತ್ತದೆ. ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ ಅವರನ್ನು ಭೇಟಿಯಾದ ಬಳಿಕ ಸಚಿವಕಾಂಕ್ಷಿಗಳಿಗೆ ಕರೆ ಹೋಗಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ