ಹಾಲು, ಮೊಸರು ದರ ಏರಿಕೆಗೆ ದರ ಏರಿಕೆಗೆ ಸಿಎಂ ತಡೆ?

ಮಂಗಳವಾರ, 15 ನವೆಂಬರ್ 2022 (08:14 IST)
ಬೆಂಗಳೂರು : ಕೆಎಂಎಫ್ ಜನರಿಗೆ ಶಾಕ್ ಕೊಟ್ಟ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ದರ ಏರಿಕೆ ಆದೇಶಕ್ಕೆ ತಡೆ ನೀಡಿದ್ದಾರೆ.
 
ಇಂದಿನಿಂದ ನಂದಿನಿ ಹಾಲಿನ ದರವನ್ನು ಮೂರು ರೂಪಾಯಿಯಷ್ಟು ಹೆಚ್ಚಳ ಮಾಡಲು ಕೆಎಂಎಫ್ ಮುಂದಾಗಿತ್ತು. ಈ ಮೂರು ರೂಪಾಯಿಯನ್ನು ರೈತರಿಗೆ ವರ್ಗಾಯಿಸಲು ಕೆಎಂಎಫ್ ಹೇಳಿತ್ತು.

ಆದ್ರೆ.. ಈ ಬಗ್ಗೆ ವರದಿ ಪ್ರಸಾರ ಆಗುತ್ತಲೇ ನಂದಿನಿ ಹಾಲು ಮೊಸರಿನ ರೇಟ್ ಸದ್ಯಕ್ಕೆ ಹೆಚ್ಚಳ ಮಾಡ್ತಿಲ್ಲ. ಇದೇ 20ಕ್ಕೆ ಸಭೆ ನಡೆಸಿ ತೀರ್ಮಾನ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಸದ್ಯ ದರ ಏರಿಕೆ ಆದೇಶವನ್ನು ಕೆಎಂಎಫ್ ಹಿಂಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ