ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯ ಮಸೀದಿ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜಾಮಿಯ ಮಸೀದಿಯೋ ಅಥವಾ ಮಂದಿರವೋ ಎಂಬ ವಿಚಾರ ಇದೀಗ ತಾರ್ಕಿಕ ಅಂತ್ಯ ಕಾಣಲು ನ್ಯಾಯಾಲಯದ ಮೆಟ್ಟಿಲು ಏರಿದೆ.
ಜಾಮಿಯ ಮಸೀದಿಯ ವಿವಾದ ನಾಳೆ ಬೆಂಗಳೂರಿನ ಹೈಕೋರ್ಟ್ ನಲ್ಲಿ ಭಜರಂಗ ಸೇನೆ ಪಿಐಎಲ್ ಸಲ್ಲಿಕೆ ಮಾಡಲಿದೆ. ಭಜರಂಗ ಸೇನೆಯಿಂದ ದಾವೆ ಹೂಡಿದ್ದು, ನಾಳೆ ಹೈಕೋರ್ಟ್ನಲ್ಲಿ ಜಾಮಿಯ ವಿವಾದ ಅಡ್ಮಿಶನ್ ಆಗಲಿರುವ ಆಗಲಿದೆ.
ಐದು ಮಂದಿ ವಕೀಲರ ತಂಡದಿಂದ ಕಾನೂನು ಹೋರಾಟ ನಡೆಯಲಿದ್ದು, ವಕೀಲ ರವಿಶಂಕರ್ ಹೆಚ್.ಎಸ್ ನೇತೃತ್ವದ ಐದು ಮಂದಿಯ ತಂಡ ಹೋರಾಟ ನಡೆಸಲಿದೆ.
ಒಂದು ಕಡೆ ನಾಳೆ ಕೋರ್ಟ್ಲ್ಲಿ ಪಿಐಎಲ್ ಸಲ್ಲಿಕೆಯಾಗಲಿದ್ದು, ಶನಿವಾರ ಭಜರಂಗ ಸೇನೆಯ ಕಾರ್ಯಕರ್ತರು ಹಾಗೂ ಹನುಮ ಭಕ್ತರಿಂದ ಹರಕೆಯ ಪಾದಯಾತ್ರೆ ನಡೆಸಲಿದ್ದಾರೆ.