ನವದೆಹಲಿ : ದಿನನಿತ್ಯ ತಮ್ಮ ಅಡುಗೆಯಲ್ಲಿ ಬಳಸುವ ಟೊಮೆಟೋ ದರ ಗಗನಕ್ಕೇರಿದು, ಗೃಹಿಣಿಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹೌದು. ಕಡಿಮೆ ದರದಲ್ಲಿ ಸಿಗುತ್ತಿದ್ದ ಟೊಮೆಟೋಗೆ ಇದೀಗ ಕೆ.ಜಿ ಆಪಲ್ ಬೆಲೆಯಾಗಿದೆ. ಕಳೆದ ಕೆಲ ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಟೊಮೆಟೋ ದರ ನೂರರ ಗಡಿ ದಾಟಿದೆ.
ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಸೇರಿದಂತೆ ಬೆಂಗಳೂರು ಸುತ್ತಮುತ್ತ ಭಾಗಗಳಲ್ಲಿ ಟೊಮೆಟೋ ಬೆಳೆ ನಾಶವಾಗಿದೆ. ಹೀಗಾಗಿ ದರದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ. ಒಂದು ಕೆ.ಜಿ ಟೊಮೆಟೋಗೆ ಹಾಪ್ ಕಾಮ್ಸ್ ನಲ್ಲಿ 110 ರೂ., ಆನ್ ಲೈನ್ ಶಾಪಿಂಗ್ ನಲ್ಲಿ 120 ರೂ. ಆಗಿದೆ. ಹೀಗಾಗಿ ಟೊಮೆಟೋ ಸಾರು, ರಸಂ, ಗೊಜ್ಜು, ಹುಳಿ ಮಾಡೋಕೆ ಆಗಲ್ಲ ಅಂತಾ ಗೃಹಿಣಿಯರು ಆಕ್ರೋಶ ಹೊರಹಾಕುತ್ತಿದ್ದಾರೆ.