ನೈಸರ್ಗಿಕ ವಿಕೋಪದಿಂದ ಯಾತ್ರಾರ್ಥಿಗಳು ಸಾವು?

ಶುಕ್ರವಾರ, 15 ಜುಲೈ 2022 (12:44 IST)
ಶ್ರೀನಗರ : ಕಳೆದ 36 ಗಂಟೆಗಳಲ್ಲಿ ಅಮರನಾಥ ಯಾತ್ರೆಯಲ್ಲಿ ಎಂಟು ಯಾತ್ರಾರ್ಥಿಗಳು ನೈಸರ್ಗಿಕ ವಿಕೋಪಗಳಿಂದ ಸಾವನ್ನಪ್ಪಿದ್ದಾರೆ.

ಈ ಮೂಲಕ ಯಾತ್ರಿಕರ ಸಾವಿನ ಸಂಖ್ಯೆ 41ಕ್ಕೆ ತಲುಪಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ನೈಸರ್ಗಿಕ ವಿಕೋಪದಿಂದ ಎಂಟು ಯಾತ್ರಾರ್ಥಿಗಳು ಮೃತಪಟ್ಟಿದ್ದು, ಅವರನ್ನು ರಾಜಸ್ಥಾನದ ಮೊಂಗಿಲಾಲ್(52), ಗುಜರಾತ್ನ ವ್ರಿಯಾಗ್ ಲಾಲ್ ಹೀರಾ ಚಂದ್ ವ್ಯಾಸ್(57), ಕರ್ನಾಟಕದ ಬಸವರಾಜ(68), ಸಿಂಗಾಪುರದ ಪೂನಿಯಾಮೂರ್ತಿ(63), ಮಹಾರಾಷ್ಟ್ರದ ಕಿರಣ್ ಚತುರ್ವೇದಿ, ಕಲವಲ ಸುಬ್ರಮಣ್ಯಂ(63), ಉತ್ತರ ಪ್ರದೇಶದ ಗೋವಿಂದ್ ಶರಣ್(34) ಮತ್ತು ಹರಿಯಾಣದ ಸತ್ವೀರ್ ಸಿಂಗ್(70) ಎಂದು ಗುರುತಿಸಲಾಗಿದೆ. 

ಕಳೆದ ವಾರ ದಕ್ಷಿಣ ಕಾಶ್ಮೀರ ಹಿಮಾಲಯದ ಗುಹೆ ದೇಗುಲದ ಬಳಿ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ 15 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು.

ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ಎಲ್ಲ ರೀತಿಯ ಭದ್ರತೆಯೊಂದಿಗೆ ಅಮರನಾಥ ಯಾತ್ರೆಯು ಜೂನ್ 30 ರಂದು ಪ್ರಾರಂಭವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ