ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸ ಲೀಕ್

ಸೋಮವಾರ, 23 ಜನವರಿ 2023 (12:40 IST)
ವಾಷಿಂಗ್ಟನ್ : ಸುಮಾರು 20 ಕೋಟಿಗೂ ಅಧಿಕ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸ ಸೋರಿಕೆಯಾಗಿರುವುದಾಗಿ ವರದಿಯಾಗಿದೆ.

ಹ್ಯಾಕರ್ಗಳು 20 ಕೋಟಿಗೂ ಅಧಿಕ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸವನ್ನು ಕದ್ದು, ಆನ್ಲೈನ್ ಹ್ಯಾಕಿಂಗ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಭದ್ರತಾ ಸಂಶೋಧಕರು ತಿಳಿಸಿದ್ದಾರೆ.
ಈ ಬಗ್ಗೆ ಇಸ್ರೇಲ್ನ ಸೈಬರ್ ಭದ್ರತೆ ಮೇಲ್ವಿಚಾರಣಾ ಸಂಸ್ಥೆ ಹಡ್ಸನ್ ರಾಕ್ನ ಸಹ ಸಂಸ್ಥಾಪಕ ಅಲೋನ್ ಗಾಲ್ ತಮ್ಮ ಲಿಂಕ್ಡ್ಇನ್ನಲ್ಲಿ ತಿಳಿಸಿದ್ದು,

ದುರದೃಷ್ಟವಶಾತ್ ಇಂತಹ ದೊಡ್ಡ ಪ್ರಮಾಣದ ಹ್ಯಾಕಿಂಗ್ಗೆ ನಿಗದಿತ ಫಿಶಿಂಗ್ ಹಾಗೂ ಡಾಕ್ಸಿಂಗ್ ಕಾರಣವಾಗಿದೆ. ಇದು ನಾನು ನೋಡಿದ ಅತ್ಯಂತ ದೊಡ್ಡ ಸೋರಿಕೆಗಳಲ್ಲಿ ಒಂದಾಗಿದೆ ಎಂದು ಬರೆದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ