ಕೇರಳ ಮಳೆಗೆ ಕೊಚ್ಚಿ ವಿಮಾನ ನಿಲ್ದಾಣದ ಪಾಡು ಹೇಳ ತೀರದು!
ಮುಂದಿನ ನಾಲ್ಕು ದಿನಗಳವರೆಗೆ ವಿಮಾನ ಸಂಚಾರವೂ ರದ್ದಾಗಿದೆ. ಮಳೆಯಿಂದಾಗಿ ಕೇರಳದಲ್ಲಿ ಸಾವನ್ನಪ್ಪಿದವರ ಸಂಖ್ಯೆ 67 ಕ್ಕೇರಿದ್ದು, ಇನ್ನೂ ಭಾರೀ ಮಳೆಯಾಗುತ್ತಿರುವುದರಿಂದ ಸಾವು ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.
ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ನೆರೆಯ ವಾತಾವರಣವಿದ್ದು, ವಿಮಾನ ನಿಲ್ದಾಣ ಈ ರೀತಿ ನಾಲ್ಕು ದಿನಗಳವರೆಗೆ ಬಂದ್ ಆಗುತ್ತಿರುವುದು ಇದೇ ಮೊದಲಾಗಿದೆ. ಇಂದಿನಿಂದಲೇ ಇಲ್ಲಿಂದ ಹಾರಾಡಬೇಕಿದ್ದ ವಿಮಾನಗಳೆಲ್ಲಾ ರದ್ದಾಗಿವೆ.