ನಂದಿಬೆಟ್ಟ : ವಿಕೇಂಡ್ ಕರ್ಫ್ಯೂ ರದ್ದು

ಭಾನುವಾರ, 27 ಮಾರ್ಚ್ 2022 (07:07 IST)
ಚಿಕ್ಕಬಳ್ಳಾಪುರ : ಕೊರೊನಾ ಹಿನ್ನೆಲೆ ವಿಕೇಂಡ್ನಲ್ಲಿ ನಂದಿಗಿರಿಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧವಿತ್ತು.

ಆದರೆ ಶನಿವಾರದಿಂದ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಲಾಕ್ಡೌನ್ ನಂತರ ಬಹುದಿನಗಳ ನಂತರ ವಿಶ್ವವಿಖ್ಯಾತ ನಂದಿಗಿರಿಧಾಮ ವಿಕೇಂಡ್ ಲಾಕ್ಡೌನ್ ತೆರವು ಮಾಡಲಾಗಿದೆ.

ಶನಿವಾರದಿಂದ ಪ್ರವಾಸಿಗರಿಗೆ ನಂದಿಗಿರಿಧಾಮಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ನಂದಿಬೆಟ್ಟದ ಮೇಲ್ಭಾಗದಲ್ಲಿ ಪಾರ್ಕಿಂಗ್ ಸಮಸ್ಯೆ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸಾಮರ್ಥ್ಯಕ್ಕೆ ಅನುಗುಣವಾಗಿ 1,000 ಬೈಕ್ ಹಾಗೂ 300 ಕಾರುಗಳಿಗಷ್ಟೇ ಅವಕಾಶ ಕೊಡಲಾಗುತ್ತಿದೆ.  ನಂದಿಬೆಟ್ಟದ ಚೆಕ್ ಪೋಸ್ಟ್ ಬಳಿಯೇ ಟಿಕೆಟ್ ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ