ಚಾಮರಾಜನಗರ: ಕೃಷ್ಣಮೃಗಗಳ ಸಂರಕ್ಷಿತ ಮೀಸಲು ಪ್ರದೇಶದಲ್ಲೇ ಕೃಷ್ಣ ಮೃಗಗಳ ಬೇಟೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಚಾಮರಾಜನಗರ ತಾಲೂಕು ಉಮ್ಮತ್ತೂರು ಬಳಿ ಇರುವ ಬಸವನಗುಡ್ಡ, ಕೊಳಲು ಗೋಪಾಲಸ್ವಾಮಿ ಬೆಟ್ಟ ಗುಡ್ಡ, ಚಾಮರಾಜನಗರ ತಾಲೋಕಿನ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ನಂಜನಗೂಡು ತಾಲ್ಲೂಕಿನ ಚಿಕ್ಕಹೊಮ್ಮ ಗುಡ್ಡ , ದೊಡ್ಡಹೊಮ್ಮ ಗುಡ್ಡ ಮೊದಲಾದ ಪ್ರದೇಶಗಳಲ್ಲಿ ಹಾಡು ಹಗಲೇ ಕೃಷ್ಣಮೃಗಗಳನ್ನು ಬಂದೂಕಿನಿಂದ ಕೊಂದು ವಾಹನಗಳಲ್ಲಿ ಕೊಂಡಯ್ಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು ಅಳಿವಿನಂಚಿನಲ್ಲಿರುವ ಈ ಅಪರೂಪದ ವನ್ಯಜೀವಿಗಳಿಗೆ ರಕ್ಷಣೆ ಇಲ್ಲದಂತಾಗಿದೆ.