ಬೆಂಗಳೂರು : ಎಣ್ಣೆ ಪ್ರಿಯರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ್ದ ರಾಜ್ಯ ಬಜೆಟ್ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿ ಶಾಕ್ ಕೊಟ್ಟಿದ್ದರು. ಈ ಬೆನ್ನಲ್ಲೇ ಇನ್ನೊಂದು ವಾರದಲ್ಲಿ ಮದ್ಯಪಾನದ ದರದಲ್ಲಿ ಏರಿಕೆಯಾಗಲಿದೆ.
ಅಬಕಾರಿ ಶುಂಕ 20% ರಷ್ಟು ಹೆಚ್ಚಳ ಮಾಡಲಾಗುತ್ತಿದ್ದು, ಇದರಿಂದ ಇನ್ನು ಮುಂದೆ ಬ್ರಾಂಡೆಡ್ ಮದ್ಯಗಳು ದುಬಾರಿಯಾಗಲಿದೆ. ಈಗಾಗಲೇ ಹೊಸ ದರ ಪಟ್ಟಿಯನ್ನು ಅಬಕಾರಿ ಇಲಾಖೆ ಬಿಡುಗಡೆ ಮಾಡಿದ್ದು, ಇದರ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬ್ಲಾಕ್ & ವೈಟ್: ಹಿಂದಿನ ಬೆಲೆ 2,464- ಏರಿಕೆ ಬೆಲೆ – 2,800
ಜಾನಿ ವಾಕರ್ ಬ್ಲಾಕ್ ಲೇಬಲ್: ಹಿಂದಿನ ಬೆಲೆ – 6,250, ಏರಿಕೆ ಬೆಲೆ – 7,150
ಚಿವಾಸ್ ರೀಗಲ್: ಹಿಂದಿನ ಬೆಲೆ – 6,200, ಏರಿಕೆ ಬೆಲೆ – 7,000
ಟೀಚರ್ಸ್: ಹಿಂದಿನ ದರ – 2,451, ಏರಿಕೆ ದರ – 2,800
ಬ್ಲಾಕ್ & ವೈಟ್: ಹಿಂದಿನದರ – 2,415, ಏರಿಕೆ ದರ – 2, 800
ರೊಮನೊವಾ ವೋಡ್ಕಾ: ಹಿಂದಿನ ಬೆಲೆ – 915, ಏರಿಕೆ ಬೆಲೆ – 1,000
100 ಪೈಪರ್ ವಿಸ್ಕಿ: ಹಿಂದಿನ ಬೆಲೆ – 106, ಏರಿಕೆ ಬೆಲೆ – 120