ಹಿಜಬ್ಗೂ ಪರೀಕ್ಷೆಗೂ ಸಂಬಂಧವಿಲ್ಲ ಎಂದ ಸುಪ್ರೀಂ!

ಗುರುವಾರ, 24 ಮಾರ್ಚ್ 2022 (12:24 IST)
ನವದೆಹಲಿ : ತರಗತಿಗಳಲ್ಲಿ ಹಿಜಬ್ ನಿಷೇಧ ಪ್ರಕರಣಕ್ಕೆ  ಸಂಬಂಧಿಸಂತೆ ಸುಪ್ರೀಂಕೋರ್ಟ್ 2ನೇ ಬಾರಿಯೂ ತುರ್ತು ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿದೆ.
 
ಇಂದು ಬೆಳಗ್ಗೆ 10:30ಕ್ಕೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿದ್ಯಾರ್ಥಿನಿ ಆಯಿಷಾ ಪರ ವಕೀಲ ದೇವದತ್ ಕಾಮತ್ ತುರ್ತು ರ್ಜಿ ವಿಚಾರಣೆ ನಡಸಬೇಕು ಎಂದು ಮುಖ್ಯ ನ್ಯಾಯಾಧೀಶ ರಮಣ ಪೀಠದಲ್ಲಿ ಮನವಿ ಮಾಡಿದರು.

ಇದೇ 28 ರಿಂದ ಪರೀಕ್ಷೆ ಆರಂಭವಾಗಲಿದೆ. ಶಾಲೆಯಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದರೆ 1 ವರ್ಷ ಹಾಳಾಗುತ್ತದೆ. ಹಾಗಾಗಿ ಶೀಘ್ರ ವಿಚಾರಣೆ ನಡೆಸಬೇಕು ಎಂದು ಅವರು ವಾದಿಸಿದರು. 

ಶಾಲೆಯಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಪಾಲಿಸಬೇಕೆಂಬ ಕರ್ನಾಟಕ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು. ಅಷ್ಟೇ ಅಲ್ಲದೇ ಹಿಜಬ್ ಮುಸ್ಲಿಂ ಧರ್ಮದ ಕಡ್ಡಾಯ ಆಚರಣೆ ಭಾಗವಲ್ಲ ಎಂದು ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ