ಬೆಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನ ಭಾಗ್ಯದ ಹೆಚ್ಚುವರಿ 5 ಕೆಜಿಯ ಬದಲಾಗಿ 170 ರೂಪಾಯಿ ಹಣ ನೀಡುವ ಯೋಜನೆಗೆ ಚಾಲನೆ ಸಿಕ್ಕಿ 1 ವಾರ ಕಳೆದರೂ 12 ಜಿಲ್ಲೆಗಳ ಫಲಾನುಭವಿಗಳಿಗೆ ಈವರೆಗೂ ಹಣ ಸಿಕ್ಕಿಲ್ಲ.
ಕೇವಲ 19 ಜಿಲ್ಲೆಯ ಫಲಾನುಭವಿಗಳಿಗೆ ಮಾತ್ರ ಅನ್ನಭಾಗ್ಯದ ಹಣ ಜಮೆಯಾಗಿದೆ. ಉಳಿದ 12 ಜಿಲ್ಲೆಗಳಿಗೆ ಹಣ ತಲುಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಆಧಾರ್ ಕಾರ್ಡ್, ಅಕೌಂಟ್ ಲಿಂಕ್ ಆಗದೇ ಇರುವುದು ಒಂದು ಸಮಸ್ಯೆಯಾದರೆ ಮತ್ತೊಂದು ಕಡೆ ಒಂದು ಫೈಲ್ನಲ್ಲಿ 20 ಸಾವಿರ ಕುಟುಂಬಗಳಿಗೆ ಮಾತ್ರ ಹಣ ಹಾಕಲು ಸಾಧ್ಯವಾಗುತ್ತಿದೆ.
ಹಂತ ಹಂತವಾಗಿ ಹಣ ಹಾಕಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ. 12 ಜಿಲ್ಲೆಗಳಿಗೆ ಹಣ ತಲುಪಲು 8 ರಿಂದ 12 ದಿನ ಬೇಕಾಗಬಹುದು ಎನ್ನುತ್ತಿದ್ದಾರೆ ಆಹಾರ ಇಲಾಖೆ ಅಧಿಕಾರಿಗಳು.