ಇಂದಿನಿಂದ ಟೋಲ್ ದರ ಏರಿಕೆ : ದರದಲ್ಲಿ ಯಾಕಿಷ್ಟು ಏರಿಳಿತ?

ಶನಿವಾರ, 2 ಸೆಪ್ಟಂಬರ್ 2023 (12:23 IST)
ಬೆಂಗಳೂರು : ರಾಜ್ಯದಲ್ಲಿ ಹೀಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಕಂಗೆಟ್ಟಿದ್ದಾರೆ. ಇತ್ತ ನೆಲಮಂಗಲ-ಹಾಸನ ನಡುವಿನ ರಾಷ್ಟ್ರೀಯ ಹೆದ್ದಾರಿ 48ರ ನೆಲಮಂಗಲ ದೇವಿಹಳ್ಳಿ ಎಕ್ಸ್ ಪ್ರೆಸ್ ಹೈವೇ ಟೋಲ್ ಶುಲ್ಕ ಹೆಚ್ಚಳಕ್ಕೆ ಇಂದು ಮಧ್ಯ ರಾತ್ರಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮೋದನೆ ನೀಡಿದೆ.


ಲಘು ವಾಹನಗಳಿಗೆ ಬರೋಬ್ಬರಿ 5 ರೂಪಾಯಿ, ಹೆವಿ ವಾಹನಗಳಿಗೆ 10 ರೂ. ಹೆಚ್ಚಳವಾಗಿದ್ದು ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ಯಾವುಕ್ಕೆ ಎಷ್ಟು ಶುಲ್ಕ..?

1. ಬಸ್ ಟ್ರಕ್
ಹಳೆ ದರ: 185 – ಸಿಂಗಲ್ ವೇ, 275 – ಡಬಲ್ ವೇ
ಹೊಸ ದರ: 200 – ಸಿಂಗಲ್ ವೇ, 300 – ಡಬಲ್ ವೇ

2. ಕಾರ್/ಜೀಪು
ಹಳೆ ದರ: 50 – ಸಿಂಗಲ್, 80 – ಡಬಲ್
ಹೊಸ ದರ: 55 – ಸಿಂಗಲ್, 85 – ಡಬಲ್

3. ಎಲ್ಸಿವಿ
ಹಳೆ ದರ: 90 – ಸಿಂಗಲ್, 135 – ಡಬಲ್
ಹೊಸ ದರ: 100 – ಸಿಂಗಲ್, 150 – ಡಬಲ್

4. ಮಲ್ಟಿ ಆಕ್ಸಲ್
ಹಳೆ ದರ: 295 – ಸಿಂಗಲ್, 440 – ಡಬಲ್
ಹೊಸ ದರ: 320 – ಸಿಂಗಲ್, 485 – ಡಬಲ್

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ