ಭಾರತ-ಪಾಕ್ ಪಂದ್ಯ ಮಳೆಗೆ ಆಹುತಿಯಾದರೆ ಟೀಂ ಇಂಡಿಯಾಗೆ ಕಷ್ಟ!

ಶುಕ್ರವಾರ, 1 ಸೆಪ್ಟಂಬರ್ 2023 (16:09 IST)
ಪಲ್ಲಿಕೆಲೆ: ಏಷ್ಯಾ ಕಪ್ ನಲ್ಲಿ ನಾಳೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿರುವ ಟೀಂ ಇಂಡಿಯಾಗೆ ಇನ್ನೊಂದು ಸಂಕಷ್ಟ ಎದುರಾಗಿದೆ.

ಈ ಪಂದ್ಯಕ್ಕೆ ಶೇ.90 ರಷ್ಟು ಮಳೆಯಾಗುವ ಸಾಧ‍್ಯತೆಯಿದೆ ಎಂದು ಈಗಾಗಲೇ ಹವಾಮಾನ ವರದಿ ತಿಳಿಸಿದೆ. ಇದು ಕ್ರಿಕೆಟ್ ಪ್ರೇಮಿಗಳನ್ನು ಬೇಸರಕ್ಕೀಡು ಮಾಡಿದೆ.

ಒಂದು ವೇಳೆ ಈ ಪಂದ್ಯ ಮಳೆಯಿಂದ ಸಂಪೂರ್ಣ ರದ್ದಾದರೆ ಭಾರತ ಸಂಕಷ್ಟಕ್ಕೆ ಸಿಲುಕಲಿದೆ. ಒಂದು ವೇಳೆ ಅರ್ಧ ಪಂದ್ಯ ನಡೆದು ಫಲಿತಾಂಶ ನಿಗದಿಯಾದರೆ ತೊಂದರೆಯೇನೂ ಇಲ್ಲ. ಆದರೆ ರದ್ದಾದರೆ ಪಾಕ್ ಜೊತೆ ಭಾರತ 1 ಅಂಕ ಹಂಚಿಕೊಳ್ಳಬೇಕಾಗುತ್ತದೆ. ಪಾಕಿಸ್ತಾನ ಈಗಾಗಲೇ ಒಂದು ಪಂದ್ಯವನ್ನು ಗೆದ್ದುಕೊಂಡಿದೆ. ಹೀಗಾಗಿ ಭಾರತ ಮುಂಬರುವ ನೇಪಾಳ ವಿರುದ್ಧದ ಪಂದ್ಯವನ್ನು ಭಾರೀ ಅಂತರದಿಂದ ಸೋಲಿಸಲೇಬೇಕಾದ ಅನಿವಾರ್ಯತೆಗೊಳಗಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ