ಸಂಡೇ ಆಲೂಗಡ್ಡೆ ಸಂಡಿಗೆ ಮಾಡಿ ನೋಡಿ

ಭಾನುವಾರ, 14 ಜೂನ್ 2020 (17:33 IST)
ಆಲೂಗಡ್ಡೆ ಚಿಪ್ಸ್ ಎಲ್ಲರೂ ಒಂದಲ್ಲ ಒಂದು ದಿನಾ ತಿಂದಿರುತ್ತಾರೆ. ಆದರೆ ಆಲೂಗಡ್ಡೆ ಸಂಡಿಗೆ ಮಾಡೋದು ಹೇಗೆ ಗೊತ್ತಾ?

ಏನೇನು ಬೇಕು?

ಉಪ್ಪು
ಆಲೂಗಡ್ಡೆ ಅರ್ಧ ಕೆಜಿ
ಹಸಿಮೆಣಸಿನಕಾಯಿ 10 ಗ್ರಾಂ
ಉದ್ದಿನಬೇಳೆ ಕಾಲು ಕೆಜಿ
ಇಂಗು

ಮಾಡೋದು ಹೇಗೆ?

ಆಲೂಗಡ್ಡೆಯನ್ನು ಸಣ್ಣಗೆ ಮಾಡಿ ನೀರಿನಲ್ಲಿ ನೆನೆಸಿಡಿ. ಉದ್ದಿನ ಬೇಳೆಯನ್ನು ತೊಳೆದು ನೆನೆಹಾಕಿ. ಚೆನ್ನಾಗಿ ನೆಂದ ನಂತರ ನೀರನ್ನೆಲ್ಲ ಬಸಿದು ತುಬ್ಬಿಕೊಳ್ಳಿ. ಆ ಬಳಿಕ ಉಪ್ಪಿನೊಂದಿಗೆ ಕುಟ್ಟಿ ಪುಡಿ ಮಾಡಿದ ಹಸಿಮೆಣಸಿನಕಾಯಿ, ಇಂಗು ಹಾಕಿ ಕಲಸಿ. ಆಮೇಲೆ ಸೇರಿಸಿ ಪ್ಲಾಸ್ಟಿಕ್ ಪೇಪರ್ ಮೇಲೆ ಸಂಡಿಗೆ ಹಾಕಿ ಒಣಗಿಸಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ