ಮತ್ಸ್ಯಾಸನದಲ್ಲಿ ಯೋಗ ಸಾಧಕನ ದೇಹ ಭಂಗಿಯು ಮೀನಿನ ಆಕಾರವನ್ನು ಪಡೆಯುವ ಕಾರಣ ಇದಕ್ಕೆ ಮತ್ಸ್ಯಾಸನವೆಂದು ಹೆಸರು. ಸಂಸ್ಕೃತದಲ್ಲಿ ಮತ್ಸವೆಂದರೆ ಮೀನು.
WD
ಮತ್ಸ್ಯಾಸನ ಹಾಕುವ ವಿಧಾನ ಪದ್ಮಾಸನ ಸ್ಥಿತಿಗೆ ಬನ್ನಿ ನಿಮ್ಮ ಮೊಣಕಾಲುಗಳು ನೆಲಕ್ಕೆ ತಾಕುತ್ತಿರಬೇಕು ನಿಧಾನವಾಗಿ ನಿಮ್ಮ ಮೊಣಕೈಗಳ ಮೇಲೆ ಭಾಗಿ ಬೆನ್ನಿನ ಮೇಲೆ ಮಲಗಿ ಈ ಭಂಗಿಯಲ್ಲಿ ನೀವು ನಿಮ್ಮ ಮೊಣಕೈ ಮತ್ತು ಕೈಗಳ ಆಧಾರ ತೆಗೆದುಕೊಳ್ಳಬಹುದು.
WD
ಕೈಗಳನ್ನು ಹಿಂದಕ್ಕೆ ತಲೆಯತ್ತ ತರಬೇಕು ಈಗ ಅಂಗೈಗಳನ್ನು ನೆಲದಮೇಲೆ ಊರಿ ನಿಮ್ಮ ಕೈಗಳು ನಿಮ್ಮ ಭುಜಗಳ ಕೆಳಗೆ ವಿರುದ್ಧ ದಿಕ್ಕಿಗೆ ಮುಖಮಾಡಿರಬೇಕು ನಿಮ್ಮ ಕೈಗಳು ಮತ್ತು ಮೊಣಕಾಲುಗಳನ್ನು ಕೆಳಗೆ ಒತ್ತಿ ನಿಮ್ಮ ಎದೆ ಮತ್ತು ಕಿಬ್ಬೊಟ್ಟೆಯನ್ನು ಮೇಲಕ್ಕೆ ಎತ್ತಿ ನೆಲದಿಂದ ನಿಮ್ಮ ನಿತಂಬ, ಬೆನ್ನು ಹಾಗು ಭುಜಗಳನ್ನು ಮೇಲಕ್ಕೆತ್ತಿ ದೇಹಕ್ಕೆ ಕೈಗಳ ಆಧಾರ ನೀಡಿ
WD
ಬೆನ್ನುಮೂಳೆಯನ್ನು ಬಿಲ್ಲಿನಂತೆ ಬಾಗಿಸಿ ಇದೇವೇಳೆ, ನಿಮ್ಮ ಕತ್ತು ಮತ್ತು ತಲೆಯನ್ನು ಸಾಧ್ಯವಿರುವಷ್ಟು ಹಿಂದಕ್ಕೆ ಬಾಗಿಸಿ ನಿಮ್ಮ ನೆತ್ತಿಯನ್ನು ನೆಲದ ಮೇಲೆ ಲಂಬವಾಗಿಸಿ ನಿಮ್ಮ ಕೈಗಳನ್ನು ಮುಂದಕ್ಕೆ ತನ್ನಿ ನಿಮ್ಮ ತೊಡೆಗಳ ಹಿಂಭಾಗವನ್ನು ಬಿಗಿಗೊಳಿಸಿ ಕಿಬ್ಬೊಟ್ಟೆ ಮತ್ತು ಎದೆಯನ್ನು ಮೇಲಕ್ಕೆತ್ತಲು ನಿಮ್ಮ ಮೊಣಕೈಗಳನ್ನು ಸನ್ನೆಯಂತೆ ಬಳಸಿ ಇದು ಬೆನ್ನುಮೂಳೆಯನ್ನು ಬಾಗಿಸಲು ಮತ್ತು ನೆತ್ತಿಯನ್ನು ನೆಲದಮೇಲೆ ಸೂಕ್ತವಾಗಿಸಲು ಸಹಾಯ ಮಾಡುವುದು. ಹೆಬ್ಬೆರಳು, ತೋರುಬೆರಳು ಮತ್ತು ನಡುಬೆರಳುಗಳಿಂದ ಕೊಕ್ಕೆಯಾಗಿಸಿ ವಿರುದ್ಧವಾಗಿರುವ ಕಾಲುಬೆರಳುಗಳನ್ನು ಮೆದುವಾಗಿ ಎಳೆಯಿರಿ ಈ ಭಂಗಿಯಲ್ಲಿ ಕನಿಷ್ಠ ಹತ್ತು ಸೆಕುಂಡುಗಳ ಕಾಲ ಇರಿ ಸಹಜವಾಗಿ ಮತ್ತು ಲಯಬದ್ಧವಾಗಿ ಉಸಿರಾಡಿ ಬಳಿಕ ನಿಧಾನಕ್ಕೆ ಆರಂಭದ ಪದ್ಮಾಸನ ಸ್ಥಿತಿಗೆ ಮರಳಿ
ಪ್ರಯೋಜನಗಳು
WD
ಎದೆ ವಿಸ್ತಾರಗೊಳ್ಳುತ್ತದೆ ಸ್ವಚ್ಛಗಾಳಿಯನ್ನು ಶ್ವಾಸಕೋಶಗಳು ಹಿಡಿದಿಡುವ ಶಕ್ತಿಯನ್ನು ಹೆಚ್ಚಿಸುತ್ತದೆ ಬೆನ್ನುಮೂಳೆಗಳು ಶಕ್ತವಾಗುತ್ತವೆ ಬೆನ್ನು ಹುರಿಯ ಮತ್ತು ಸರ್ವಿಕ್ ಪ್ರದೇಶಗಳು ಹೆಚ್ಚು ನಮ್ಯವಾಗುತ್ತವೆ ಮತ್ತು ವಿಸ್ತಾರವಾಗುತ್ತವೆ ಸೂಕ್ತವಲ್ಲ ರೀತಿಯ ಕುಳಿತುಕೊಳ್ಳುವಿಕೆಯಿಂದ ಉಂಟಾಗುವ ಬೆನ್ನುಹುರಿಯ ಸಮಸ್ಯೆಗಳನ್ನು ಸರಿಪಡಿಸುತ್ತದೆ ಎಚ್ಚರಿಕೆ ಕತ್ತು ಅಥವಾ ಎದೆನೋವಿನಿಂದ ಬಳಲುತ್ತಿದ್ದರೆ ಈ ಆಸನವನ್ನು ಮಾಡಬೇಡಿ